ಮಂಗಳವಾರ, ಸೆಪ್ಟೆಂಬರ್ 17, 2019
21 °C

ಮೋದಿಯವರ ದ್ವೇಷದ ಪ್ರಚಾರ ವಿರುದ್ಧ 'ಪ್ರೀತಿ' ಗೆಲುವು ಸಾಧಿಸಲಿದೆ: ರಾಹುಲ್ ಗಾಂಧಿ

Published:
Updated:

ನವದೆಹಲಿ: ಭಾನುವಾರ ನವದೆಹಲಿಯಲ್ಲಿ ಮತದಾನ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮೋದಿಯವರ ದ್ವೇಷದ ಪ್ರಚಾರ ವಿರುದ್ಧ 'ಪ್ರೀತಿ ಗೆಲ್ಲುತ್ತದೆ' ಎಂದಿದ್ದಾರೆ.

ನಿರುದ್ಯೋಗ, ರೈತರ ಸಂಕಷ್ಟ, ನೋಟು ರದ್ದತಿ, ರಫೇಲ್ ಹೀಗೆ ಹಲವಾರು ವಿಷಯಗಳ ವಿರುದ್ಧ ಈ ಚುನಾವಣಾ ಕಣದಲ್ಲಿ ಹೋರಾಟ ನಡೆಯುತ್ತಿದೆ. ನರೇಂದ್ರ ಮೋದಿ ಚುನಾವಣಾ ಪ್ರಚಾರದಲ್ಲಿ ನಮ್ಮ ವಿರುದ್ಧ ದ್ವೇಷ ಮಾತುಗಳನ್ನಾಡಿದರು. ಆದರೆ ನಾವು ಪ್ರೀತಿ ತೋರಿದೆವು.ಇಲ್ಲಿ ಪ್ರೀತಿ ಗೆಲ್ಲುತ್ತದೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ ರಾಹುಲ್.

ರಾಹುಲ್ ಮತದಾನ ಮಾಡಿರುವ ನವದೆಹಲಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಜಯ್ ಮಕೇನ್ ಸ್ಪರ್ಧಿಸುತ್ತಿದ್ದು, ಬಿಜೆಪಿಯ ಮೀನಾಕ್ಷಿ ಲೇಖಿ ಮತ್ತು ಆಮ್ ಆದ್ಮಿ ಪಕ್ಷದ ಬ್ರಿಜೇಶ್ ಗೋಯಲ್ ಪ್ರತಿಸ್ಪರ್ಧಿಗಳಾಗಿದ್ದಾರೆ.

ದೆಹಲಿಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು  1.43 ಕೋಟಿ ಮತದಾರರು ಇಲ್ಲಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಬೆಳಿಗ್ಗೆ 10 ಗಂಟೆ ವೇಳೆಗೆ ಶೇ 10.8 ಮತದಾನ

Post Comments (+)