ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್, ಡೀಸೆಲ್ ಆಯ್ತು, ಈಗ ಎಲ್‌ಪಿಜಿ ಬೆಲೆ ಏರಿಕೆ ಸರದಿ

ಸಬ್ಸಿಡಿ ಸಹಿತ ಎಲ್‌ಪಿಜಿ ₹2.89, ಸಬ್ಸಿಡಿರಹಿತ ₹59 ತುಟ್ಟಿ
Last Updated 30 ಸೆಪ್ಟೆಂಬರ್ 2018, 20:31 IST
ಅಕ್ಷರ ಗಾತ್ರ

ನವದೆಹಲಿ: ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್‌ (ಎಲ್‌ಪಿಜಿ) ಬೆಲೆಯನ್ನು₹2.89 ಮತ್ತು ಸಬ್ಸಿಡಿರಹಿತ ಪ್ರತಿ ಸಿಲಿಂಡರ್‌ ಬೆಲೆಯನ್ನು₹59ರಂತೆ ಹೆಚ್ಚಿಸಲಾಗಿದೆ.

ಕಚ್ಚಾ ತೈಲ ಬೆಲೆ ಏರಿಕೆ ಮತ್ತು ವಿದೇಶ ವಿನಿಮಯ ಏರಿಳಿತದಿಂದಾಗಿ ಬೆಲೆ ಏರಿಕೆ ಮಾಡಲಾಗಿದೆ.

ಸಿಲಿಂಡರ್ ಬಳಕೆದಾರರ ಬ್ಯಾಂಕ್ ಅಕೌಂಟ್ ಖಾತೆಗೆ ವರ್ಗಾಯಿಸಲಾಗುವ ಸಬ್ಸಿಡಿ ಮೊತ್ತ ಅಕ್ಟೋಬರ್‌ನಿಂದ ಪ್ರತಿ ಸಿಲಿಂಡರ್‌ಗೆ ₹376.60 ಆಗಲಿದೆ. ಇದು ಸೆಪ್ಟೆಂಬರ್‌ನಲ್ಲಿ ₹320.49 ಇತ್ತು.

ಎಲ್‌ಪಿಜಿ ದರ ಏರಿಕೆ ಆಗುತ್ತಿದ್ದರೂ ಸಬ್ಸಿಡಿ ಪಡೆಯುವ ಗ್ರಾಹಕರನ್ನು ರಕ್ಷಿಸಲಾಗುವುದು ಎಂದು ಭಾರತೀಯ ತೈಲ ನಿಗಮ (ಐಒಸಿ) ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT