ಸೋಮವಾರ, ಡಿಸೆಂಬರ್ 9, 2019
17 °C

ಗೋರಕ್ಷಕರ ಥಳಿತಕ್ಕೆ ಮತ್ತೊಂದು ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಹಸು ಕಳ್ಳ ಎಂಬ ಶಂಕೆಯ ಮೇಲೆ ರಾಜಸ್ಥಾನದ ಅಲ್ವರ್‌ನಲ್ಲಿ ಶುಕ್ರವಾರ ರಾತ್ರಿ ಅಕ್ಬರ್ ಖಾನ್ (25) ಎಂಬುವರನ್ನು ಸ್ವಯಂಘೋಷಿತ ಗೋರಕ್ಷಕರು ಹೊಡೆದು ಕೊಂದಿದ್ದಾರೆ.

ಪೊಲೀಸರು ಇಬ್ಬರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ದಾಳಿಯನ್ನು ಮುಖ್ಯಮಂತ್ರಿ ವಸುಂಧರಾ ರಾಜೆ ಖಂಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಹಸುಕಳ್ಳರು ಎಂಬ ಶಂಕೆಯಲ್ಲಿ ಅಲ್ವರ್‌ನಲ್ಲಿ ಒಂದು ವರ್ಷದಲ್ಲಿ ಮೂವರನ್ನು ಹೊಡೆದು ಕೊಲ್ಲಲಾಗಿದೆ. 2017ರ ಏಪ್ರಿಲ್ 3ರಂದು ಪೆಹ್ಲು ಖಾನ್‌ ಎಂಬುವರನ್ನು ಹೊಡೆದು ಕೊಲ್ಲಲಾಗಿತ್ತು. ಅದೇ ವರ್ಷ ನವೆಂಬರ್‌ನಲ್ಲಿ ಉಮರ್ ಖಾನ್ ಎಂಬ ವ್ಯಕ್ತಿಯನ್ನೂ ಹತ್ಯೆ ಮಾಡಲಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು