ಸೋಮವಾರ, ಅಕ್ಟೋಬರ್ 21, 2019
22 °C
ಗುಂಪುಹಲ್ಲೆ ಪಾಶ್ಚಿಮಾತ್ಯ ಮೂಲದ್ದು ಎಂದಿದ್ದ ಮೋಹನ್ ಭಾಗವತ್‌ ಹೇಳಿಕೆಗೆ ಆಕ್ರೋಶ

ಗುಂಪುಹತ್ಯೆಗೆ ಪ್ರಾದೇಶಿಕ ಗಡಿ ಮಿತಿ ಇಲ್ಲ: ಸಿಪಿಎಂ

Published:
Updated:

ನವದೆಹಲಿ: ‘ಗುಂಪುಹಲ್ಲೆ–ಹತ್ಯೆ ಎಂಬುದು ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಪರಿಕಲ್ಪನೆ ಅಲ್ಲ. ಇದು ಪಾಶ್ಚಿಮಾತ್ಯದ ಪರಿಕಲ್ಪನೆ ಎನ್ನುವ ಮೂಲಕ ದೇಶದಲ್ಲಿ ನಡೆದಿರುವ ಗುಂಪುಹತ್ಯೆಗಳನ್ನು ಆರ್‌ಎಸ್‌ಎಸ್ ನಿರಾಕರಿಸುತ್ತಿದೆ’ ಎಂದು ಸಿಪಿಎಂ ಟೀಕಿಸಿದೆ.

‘ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾಷಣವು ಆರ್‌ಎಸ್‌ಎಸ್‌ನ ಫ್ಯಾಸಿಸ್ಟ್‌ ಮನೋಭಾವವನ್ನು ಜಗ್ಗಾಜಾಹೀರು ಮಾಡಿದೆ’ ಎಂದು ಸಿಪಿಎಂ ತನ್ನ ಮುಖವಾಣಿ ‘ಪೀಪಲ್ಸ್ ಡೆಮಾಕ್ರಸಿ’ಯ ಸಂಪಾದಕೀಯದಲ್ಲಿ ಟೀಕಿಸಿದೆ.

‘ಒಬ್ಬ ವ್ಯಕ್ತಿಯನ್ನು ಗುಂಪೊಂದು ಹೊಡೆದು ಕೊಲ್ಲುವುದನ್ನು ಗುಂಪುಹತ್ಯೆ ಎನ್ನಲಾಗುತ್ತದೆ. ಇದು ಯಾವುದೇ ಸಂಸ್ಕೃತಿಗೆ ಸೇರಿದ್ದು ಅಲ್ಲ. ಆದರೆ ದೇಶದಲ್ಲಿ ಗುಂಪುಹತ್ಯೆಗಳು ನಡೆದೇ ಇಲ್ಲ ಎಂಬಂತೆ ಭಾಗವತ್ ಮಾತನಾಡಿದ್ದಾರೆ. ಗೋರಕ್ಷಕರಿಂದ ಗುಂಪುಹಲ್ಲೆ–ಹತ್ಯೆಗಳಿಗೆ ಧಾರ್ಮಿಕ ಅಲ್ಪಸಂಖ್ಯಾತರು ಬಲಿಯಾಗುತ್ತಿದ್ದಾರೆ ಎಂಬ ಕನಿಷ್ಠ ಜ್ಞಾನವೂ ಭಾಗವತ್‌ಗೆ ಇಲ್ಲ. ಅಲ್ಪಸಂಖ್ಯಾತರನ್ನು ಅಲ್ಪಸಂಖ್ಯಾತರು ಎಂದು ಕರೆಯುವ ಸೌಜನ್ಯವೂ ಅವರಿಗಿಲ್ಲ’ ಎಂದು ಸಿಪಿಎಂ ಟೀಕಿಸಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)