ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಲ್‌ಪ್ಲಾಜಾ: ಗಣ್ಯರಿಗೆ ಪ್ರತ್ಯೇಕ ದಾರಿ ನೀಡಲು ಚೆನ್ನೈ ಹೈಕೋರ್ಟ್‌ ಸೂಚನೆ

Last Updated 30 ಆಗಸ್ಟ್ 2018, 15:19 IST
ಅಕ್ಷರ ಗಾತ್ರ

ಚೆನ್ನೈ: ನ್ಯಾಯಾಧೀಶರೂ ಸೇರಿದಂತೆ ಗಣ್ಯ ವ್ಯಕ್ತಿಗಳಿಗಾಗಿ ಟೋಲ್‌ಪ್ಲಾಜಾಗಳಲ್ಲಿ ಪ್ರತ್ಯೇಕ ಮಾರ್ಗ ಅಳವಡಿಸುವಂತೆ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರಕ್ಕೆ (ಎನ್‌ಎಚ್ಎಐ) ಚೆನ್ನೈ ಹೈಕೋರ್ಟ್‌ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಹುಲುವಾಡಿ ಜಿ.ರಮೇಶ್‌ ಹಾಗೂ ಎಂ.ವಿ.ಮುರಳೀಧರನ್‌ ಅವರನ್ನು ಒಳಗೊಂಡ ಪೀಠ ಈ ನಿರ್ದೇಶನ ನೀಡಿದೆ.

‘ಈ ಸಂಬಂಧ ಎಲ್ಲ ಟೋಲ್‌ಪ್ಲಾಜಾಗಳಿಗೆ ಸುತ್ತೋಲೆ ಹೊರಡಿಸಬೇಕು. ಗಣ್ಯ ವ್ಯಕ್ತಿಗಳು ಹಾಗೂ ನ್ಯಾಯಾಧೀಶರು ಪ್ರಯಾಣಿಸುವ ವಾಹನಗಳು ಇನ್ನು ಮುಂದೆ ಯಾವುದೇ ಟೋಲ್‌ಪ್ಲಾಜಾಗಳಲ್ಲಿ ಸರದಿಯಲ್ಲಿ ನಿಲ್ಲುವಂತಾಗಬಾರದು. ಒಂದು ವೇಳೆ ಈ ಆದೇಶವನ್ನು ಉಲ್ಲಂಘಿಸಿದ್ದೇ ಆದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಪೀಠ ಎನ್‌ಎಚ್ಎಐ ಅಧಿಕಾರಿಗಳಿಗೆ ಎಚ್ಚರಿಸಿತು.

ಅಸಮಾಧಾನ: ಹೈಕೋರ್ಟ್‌ ನೀಡಿರುವ ಈ ಆದೇಶಕ್ಕೆ ಸಾರ್ಜನಿಕರಿಂದ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ವಿಐಪಿ ಸಂಸ್ಕೃತಿ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT