ಸೋಮವಾರ, ನವೆಂಬರ್ 18, 2019
28 °C

ಮದ್ರಾಸ್‌ ಸಿಜೆ ರಾಜೀನಾಮೆ ಅಂಗಿಕಾರ

Published:
Updated:

ನವದೆಹಲಿ: ಮದ್ರಾಸ್‌ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿ ವಿ.ಕೆ.ತಾಹಿಲ್‌ರಮಣಿ ಅವರ ರಾಜೀನಾಮೆಯನ್ನು ಸರ್ಕಾರ ಅಂಗೀಕರಿಸಿದ್ದು, ಈ ಕುರಿತು ಅಧಿಸೂಚನೆ ಹೊರಡಿಸಿದೆ. 

ಮೇಘಾಲಯ ಹೈಕೋರ್ಟ್‌ಗೆ ವರ್ಗಾವಣೆ ಮಾಡಿದ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ತಾಹಿಲ್‌ರಮಣಿ ಅವರು ಸುಪ್ರೀಂ ಕೋರ್ಟ್‌ ಕೊಲೀಜಿಯಂಗೆ ಮನವಿ ಸಲ್ಲಿಸಿದ್ದರು. ಆದರೆ ಮನವಿ ತಿರಸ್ಕೃತವಾದ ಕಾರಣ ಸೆ.6ರಂದು ಅವರು ಮುಖ್ಯನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಮದ್ರಾಸ್‌ ಹೈಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ವಿ.ಕೊಠಾರಿ ಅವರನ್ನು ನೇಮಿಸಿ ಮತ್ತೊಂದು ಅಧಿಸೂಚನೆಯನ್ನು ಸರ್ಕಾರ ಹೊರಡಿಸಿದೆ. 

 

ಪ್ರತಿಕ್ರಿಯಿಸಿ (+)