ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಎಡವಟ್ಟು: ಗರ್ಭಿಣಿಗೆ ‘ರಕ್ತ‘ ವರ್ಗಾವಣೆ ಬಳಿಕ ಎಚ್‌ಐವಿ ಸೋಂಕು

Last Updated 27 ಡಿಸೆಂಬರ್ 2018, 4:16 IST
ಅಕ್ಷರ ಗಾತ್ರ

ಮಧುರೈ: ಸೋಂಕಿತ ರಕ್ತ ವರ್ಗಾವಣೆ ಮಾಡಿದ ಕಾರಣಗರ್ಭಿಣಿ ಮಹಿಳೆಯೊಬ್ಬರಿಗೆ ಎಚ್‌ಐವಿ ಕಾಣಿಸಿಕೊಂಡಿರುವ ಪ್ರಕರಣ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಬೆಳಕಿಗೆ ಬಂದಿದೆ.

‘ಎಚ್‌ಐವಿ ಸೋಂಕಿತ ವ್ಯಕ್ತಿಯೊಬ್ಬ ಸರಿಯಾಗಿ ಮಾಹಿತಿ ನೀಡದೆ ಈ ಹಿಂದೆಯೇ ರಕ್ತ ನೀಡಿದ್ದಾನೆ. ಆತನ ರಕ್ತದ ಮಾದರಿಯನ್ನು ಸೂಕ್ತ ರೀತಿಯ ಪರೀಕ್ಷೆಗೊಳಪಡಿಸಲು ಸಿಬ್ಬಂದಿಯೂ ಎಡವಿದ್ದಾರೆ. ಅದೇ ರಕ್ತವನ್ನು ವರ್ಗಾವಣೆ ಮಾಡಿರುವುದರಿಂದಾಗಿಗರ್ಭಿಣಿಗೆ ಎಚ್‌ಐವಿ ಸೋಂಕು ತಗುಲಿದೆ’ ಎಂದು ರಾಜ್ಯ ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್‌ ತಿಳಿಸಿದ್ದಾರೆ.

‘ಎಚ್‌ಐವಿ ಸೋಂಕಿತ ರಕ್ತವನ್ನು ಗುರುತಿಸಿ, ದಾಖಲಿಸಲು ವಿಫಲವಾಗಿರುವುದು ಹಾಗೂ ಅದನ್ನುಗರ್ಭಿಣಿ ಮಹಿಳೆಗೆ ವರ್ಗಾವಣೆ ಮಾಡಿರುವುದು ದುರದೃಷ್ಟಕರ.ಲ್ಯಾಬ್‌ ಟೆಕ್ನಿಷಿಯನ್‌ ಹಾಗೂ ಅಧಿಕಾರಿಗಳು ಈ ಅಚಾತುರ್ಯಕ್ಕೆ ಜವಾಬ್ದಾರರು’ ಎಂದೂ ಕಿಡಿಕಾರಿದ್ದಾರೆ.

ಗರ್ಭದಲ್ಲಿರುವ ಮಗುವಿಗೆ ವೈರಾಣು ತಗುಲದಂತೆ ಅಗತ್ಯ ಚಿಕಿತ್ಸೆಯನ್ನು ತಮ್ಮ ಹೆಂಡತಿಗೆ ನೀಡಬೇಕು ಎಂದು ಸಂತ್ರಸ್ತ ಮಹಿಳೆಯ ಪತಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT