ಗಂಡು ಮಗು ಕೊಂದ ತಾಯಿ

7

ಗಂಡು ಮಗು ಕೊಂದ ತಾಯಿ

Published:
Updated:

ಔರಂಗಬಾದ್‌ : 10 ತಿಂಗಳ ಗಂಡು ಮಗುವನ್ನು ಕೊಂದು, ಶವವನ್ನು ಮನೆಯ ಪಕ್ಕದ ನೀರಿನ ಡ್ರಂನಲ್ಲಿ ಮುಳುಗಿಸಿದ ಆರೋಪದ ಮೇಲೆ ಮಗುವಿನ ತಾಯಿ ವೇದಿಕಾ ಎರಾಂಡೆ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. 

‘ನನಗೆ ಮೊದಲೇ ಗಂಡು ಮಗು ಇದೆ. ಎರಡನೇ ಬಾರಿ ಗರ್ಭಿಣಿಯಾದಾಗ ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದೆ. ಗಂಡು ಮಗುವಾದ ಕಾರಣ ಕೊಂದಿದ್ದೇನೆ’ ಎಂದು ವೇದಿಕಾ ಹೇಳಿದ್ದಾರೆ. ಸೆಕ್ಷನ್‌ 302ರ ಅನ್ವಯ ಪ್ರಕರಣ ದಾಖಲಾಗಿದೆ.

‘ಮಗು ಪ್ರೇಮ್‌ ಪರಮೇಶ್ವರ ಎರಾಂಡೆ ಅಪಹರಣಕ್ಕೊಳಗಾಗಿದೆ’ ಎಂದು ಭಾನುವಾರ ವೇದಿಕಾ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಮಗುವಿನ ಮೃತದೇಹವನ್ನು ವೇದಿಕಾ ಅವರ ಮನೆಯ ಆವರಣದಲ್ಲಿಯೇ ಪತ್ತೆ ಮಾಡಲಾಯಿತು. ವಿಚಾರಣೆ ಬಳಿಕ ನಿಜಾಂಶ ತಿಳಿಯಿತು ಎಂದು ಪೊಲೀಸರು ಹೇಳಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !