ಶನಿವಾರ, ನವೆಂಬರ್ 16, 2019
21 °C

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ: 3 ಗಂಟೆವರೆಗೆ ಶೇ 31.5 ಮತದಾನ

Published:
Updated:
Maharashtra Voting

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಶೇ. 31.5ರಷ್ಟು ಮತದಾನ ದಾಖಲಾಗಿದೆ.

288 ವಿಧಾನಸಭಾ ಕ್ಷೇತ್ರಗಳಿರುವ ಮಹಾರಾಷ್ಟ್ರದಲ್ಲಿ ಸೋಮವಾರ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿತ್ತು. ಇದರೊಂದಿಗೆ ಸತಾರ ಲೋಕಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ. 6 ಗಂಟೆಗೆ ಮತದಾನ ಮುಕ್ತಾಯವಾಗಲಿದೆ.

ಮಹಾ ಚುನಾವಣೆಗೆ ಮತದಾನ: ಎಲ್ಲೆಲ್ಲಿ, ಏನೇನಾಯ್ತು? 
ಅಮರಾವತಿ ಜಿಲ್ಲೆಯಲ್ಲಿ ಸ್ವಾಭಿಮಾನಿ ಪಕ್ಷದ ಅಭ್ಯರ್ಥಿ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಮೊಟಾರ್ ಸೈಕಲ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿದ್ದಾರೆ. ಅಭ್ಯರ್ಥಿಯನ್ನು ಕಾರಿನಿಂದ ಹೊರಗೆಳೆದು ಹಲ್ಲೆ ನಡೆಸಿದ ದುಷ್ಕರ್ಮಿಗಳು ಆಮೇಲೆ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಗಾಯಗೊಂಡ ಅಭ್ಯರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ದೇವೇಂದ್ರ ಫಡಣವೀಸ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಮೊದಲಾದ ರಾಜಕಾರಣಿಗಳು ಮತದಾನ ಮಾಡಿದ್ದಾರೆ.

ಬಾಲಿವುಡ್ ಸೆಲೆಬ್ರಿಟಿಗಳಾದ ಅಮೀರ್ ಖಾನ್ , ಶಾರುಖ್ ಖಾನ್, ಮಾಧುರಿ  ದೀಕ್ಷಿತ್ ನೇನೆ, ದೀಪಿಕಾ ಪಡುಕೋಣ್ ಮತ್ತು ಜಾನ್ ಅಬ್ರಹಾಂ ಮತದಾನ ಮಾಡಿದ್ದಾರೆ.

ಜಯಾ ಬಚ್ಚನ್, ಅಭಿಷೇಕ್ ಬಚ್ಚನ್, ಅಮಿತಾಬ್ ಬಚ್ಚನ್ ಮತ್ತು ಐಶ್ವರ್ಯಾ ರೈ  ಜುಹುನಲ್ಲಿರುವ ಮತದಾನ ಕೇಂದ್ರದಲ್ಲಿ ಮತದಾನ ಮಾಡಿದ್ದಾರೆ.

ಪಶ್ಚಿಮ ಬಾಂದ್ರಾದಲ್ಲಿ ಶಾರುಖ್ ಖಾನ್ ಮತ್ತು ಪತ್ನಿ ಗೌರಿ ಮತದಾನ ಮಾಡಿದ್ದಾರೆ.

 

ಮಾಹಿಮ್ ಮುನ್ಸಿಪಲ್ ಶಾಲೆಯ ಮತದಾನ ಕೇಂದ್ರ ರೂಂ ಸಂಖ್ಯೆ 50ರಲ್ಲಿ ನಕಲಿ ಮತದಾನ
ಅಬ್ದುಲ್ ಅಜೀಜ್ ಮೆಮನ್ ಎಂಬ ವ್ಯಕ್ತಿ ಮತದಾನ ಮಾಡಲು ಬಂದಾಗ ಬೇರೆ ಯಾರೋ ವ್ಯಕ್ತಿಗಳು ಅದಾಗಲೇ ಅಜೀಜ್ ಅವರ ಹೆಸರಲ್ಲಿ ಮತದಾನ ಮಾಡಿರುವುದು ಪತ್ತೆಯಾಗಿದೆ.

ಇದನ್ನೂ ಓದಿ:  'ಮಹಾ' ಚುನಾವಣೆ; ಷೇರುಪೇಟೆ ವಹಿವಾಟಿಗೆ ರಜೆ

ಪ್ರತಿಕ್ರಿಯಿಸಿ (+)