ಉತ್ತರ ಪ್ರದೇಶ ಫಲಿತಾಂಶ ಮರೆಯದಿರಿ: ಪಕ್ಷದ ನಾಯಕನಿಂದಲೇ ಕಾಂಗ್ರೆಸ್ಗೆ ಎಚ್ಚರಿಕೆ

ನವದೆಹಲಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಸಲುವಾಗಿ ಶಿವಸೇನಾ ಜೊತೆ ಮೈತ್ರಿ ಮಾಡಿಕೊಂಡರೆ, ಉತ್ತರ ಪ್ರದೇಶದ ಫಲಿತಾಂಶವೇ ಮರುಕಳಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ತಮ್ಮ ಪಕ್ಷಕ್ಕೆ ಎಚ್ಚರಿಸಿದ್ದಾರೆ.
ಮುಂಬೈ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷರಾಗಿರುವ ಸಂಜಯ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಯಾವುದೇ ಒತ್ತಡಗಳಿಗೆ ಒಳಗಾಗಬಾರದು ಎಂದು ಟ್ವಿಟರ್ನಲ್ಲಿ ಮನವಿ ಮಾಡಿದ್ದಾರೆ.
‘ಉತ್ತರ ಪ್ರದೇಶದಲ್ಲಿ ವರ್ಷದ ಹಿಂದೆ ಬಿಎಸ್ಪಿ(ಬಹುಜನ ಸಮಾಜವಾದಿ ಪಕ್ಷ) ಜೊತೆ ಕೈಜೋಡಿಸಿ ತಪ್ಪು ಮಾಡಿದ್ದೆವು. ಕಾಂಗ್ರೆಸ್ಗೆ ಆ ವೈಫಲ್ಯದಿಂದ ಚೇತರಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಅದೇ ತಪ್ಪನ್ನು ಮಹಾರಾಷ್ಟ್ರದಲ್ಲೂ ಮಾಡುತ್ತಿದ್ದೇವೆ’ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
वर्षों पहले उत्तर प्रदेश में #BSP के साथ गठबंधन करके काँग्रेस ने गलती की थी।
तब से ऐसी पिटी कि आज तक नहीं उठ पाई।
महाराष्ट्र में हम वही गलती कर रहे हैं।
शिवसेना की सरकार में तीसरे नंबर की पार्टी बनना कॉंग्रेस को यहां दफन करने जैसा है।
बेहतर होगा,काँग्रेस अध्यक्ष दबाव में न आएं।— Sanjay Nirupam (@sanjaynirupam) November 21, 2019
ಶಿವಸೇನಾದ ಮುಖವಾಣಿ ಸಾಮ್ನಾದ ಮಾಜಿ ಸಂಪಾದಕರಾಗಿರುವ ಸಂಜಯ್ ಅದೇ ಪಕ್ಷದಿಂದ ರಾಜಕೀಯ ಆರಂಭಿಸಿದ್ದರು. ರಾಜ್ಯಸಭೆಗೂ ಆಯ್ಕೆಯಾಗಿದ್ದ ಅವರನ್ನು ರಾಜ್ಯಸಭೆಯಲ್ಲಿ ಪಕ್ಷದ ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು.
2015ರಲ್ಲಿ ಸೇನಾದಿಂದ ಹೊರಬಂದಿದ್ದ ಅವರು ಕಾಂಗ್ರೆಸ್ ಸೇರಿದ್ದರು.