ಮಹಾರಾಷ್ಟ್ರ: ಡಿಸಿಪಿ ವಿರುದ್ಧ ಪ್ರಕರಣ ದಾಖಲು

7
ಮಹಿಳಾ ಕಾನ್‌ಸ್ಟೆಬಲ್‌ ಪುತ್ರಿ ಮೇಲೆ ಅತ್ಯಾಚಾರ

ಮಹಾರಾಷ್ಟ್ರ: ಡಿಸಿಪಿ ವಿರುದ್ಧ ಪ್ರಕರಣ ದಾಖಲು

Published:
Updated:

ಔರಂಗಾಬಾದ್‌, ಮಹಾರಾಷ್ಟ್ರ: ಕೆಲಸ ಕೊಡಿಸುವ ಆಮಿಷವೊಡ್ಡಿ ಮಹಿಳಾ ಕಾನ್‌ಸ್ಟೆಬಲ್‌ ಪುತ್ರಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಇಲ್ಲಿನ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

‘ಡಿಸಿಪಿ ರಾಹುಲ್‌ ಶ್ರೀರಾಮ್‌ ಅವರು ಫೆಬ್ರುವರಿ ಮತ್ತು ಜೂನ್‌ 21ರ ನಡುವೆ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ’ ಎಂದು 23 ವರ್ಷದ ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.

‘ಈ ಕುರಿತು ಯುವತಿ ಕೆಲವು ದಿನಗಳ ಹಿಂದೆಯೇ ದೂರು ನೀಡಿದ್ದರು. ಅನಂತರ ರಾಹುಲ್‌ ರಜೆ ಮೇಲೆ ತೆರಳಿದ್ದರು. ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ’ ಎಂದು ಡಿಸಿಪಿ ವಿನಾಯಕ್‌ ಧಕ್ನೆ’ ತಿಳಿಸಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !