ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ವಿಧಾನಸಭಾ ಫಲಿತಾಂಶ ಪ್ರಕಟ| ಬಿಜೆಪಿ–ಸೇನೆಗೆ ಸ್ಪಷ್ಟ ಬಹುಮತ

Last Updated 24 ಅಕ್ಟೋಬರ್ 2019, 17:00 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ 288 ಕ್ಷೇತ್ರಗಳ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಯಾವುದೇ ಒಂದು ಪಕ್ಷಕ್ಕೆ ಸಂಪೂರ್ಣ ಬಹುಮತ ದೊರೆತಿಲ್ಲ.

ಬಿಜೆಪಿ 105 ಸ್ಥಾನಗಳನ್ನು ಪಡೆದಿದ್ದು, ಶಿವಸೇನಾ 56 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇನ್ನು ಕಾಂಗ್ರೆಸ್‌ 44 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಎನ್‌ಸಿಪಿ ಕಳೆದ ಚುನಾವಣೆಗಿಂತ ಉತ್ತಮ ಸ್ಥಾನಗಳನ್ನು ಪಡೆದಿದ್ದು, 54 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ.

ಚುನಾವಣಾ ಪೂರ್ವ ಮೈತ್ರಿ ಮಾತುಕತೆಯಂತೆ ಬಿಜೆಪಿ ಮತ್ತು ಶಿವಸೇನಾ ಮೈತ್ರಿಗೆ ಸ್ಪಷ್ಟ ಬಹುಮತ ಸಿಕ್ಕಿದ್ದು, ಎರಡೂ ಪಕ್ಷಗಳು ಸರ್ಕಾರ ರಚಿಸುವತ್ತಾ ಚಿತ್ತ ನೆಟ್ಟಿವೆ. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ,ಮಹಾರಾಷ್ಟ್ರದ ಇತಿಹಾಸದಲ್ಲಿಯೇ ಇದು ದಾಖಲಾಗಲಿದೆ. ಸತತ ಎರಡು ಅವಧಿಗೂ ಒಂದೇ ಸರ್ಕಾರ ಅಧಿಕಾರ ನಡೆಸಿದ ಉದಾಹರಣೆ ಇಲ್ಲಿಲ್ಲ.

50:50 ಅಧಿಕಾರದ ಮಾತುಕತೆ ಈಗಾಗಲೇ ಬಿಜೆಪಿ ಮತ್ತು ಸೇನೆಯ ನಡುವೆ ಆಗಿದೆ. ಆದರೆ, ಠಾಕ್ರೆ ಕುಟುಂಬದಲ್ಲಿ ಚುನಾವಣೆ ಎದುರಿಸಿ ಭಾರಿ ಅಂತರದಲ್ಲಿ ಗೆಲುವು ಪಡೆದಿರುವ ಆದಿತ್ಯ ಠಾಕ್ರೆಗೆ ಪ್ರಮುಖ ಸ್ಥಾನದ ಬೇಡಿಕೆಯನ್ನು ಶಿವಸೇನೆ ಇಡಬಹುದು ಎನ್ನುವ ಮಾತು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಏರುಪೇರಾದರೆಕಾಂಗ್ರೆಸ್‌ , ಎನ್‌ಸಿಪಿ ಮತ್ತು ಶಿವಸೇನಾ ಮೂರು ಪಕ್ಷಗಳು ಸೇರಿಯೂ ಸರ್ಕಾರ ರಚಿಸುವ ಸಾಧ್ಯತೆಯನ್ನು ತಳ್ಳಿಹಾಕುವ ಹಾಗಿಲ್ಲ.

ಏಳು ಸಚಿವರಿಗೆ ಸೋಲು

ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನಾ ಮೈತ್ರಿ ಗೆಲುವಿತ್ತಾ ಮುನ್ನುಗ್ಗುತ್ತಿದ್ದರು,ಏಳು ಹಾಲಿ ಸಚಿವರು ಸೋಲು ಸರ್ಕಾರ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಪಂಕಜ್‌ ಮುಂಡೆ, ರಾಮ್‌ ಶಿಂಧೆ, ಮದನ್‌ ಯೆರವಾರ್. ಅರ್ಜುನ್‌ ಖೋಟ್ಕರ್‌, ವಿಜಯ್‌ ಶಿವತಾರೆ, ಬಾಲಾ ಭೀಗ್ಡೆ ಮತ್ತು ಅನಿಲ್‌ ಬೊಂದೆ ಸೋತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT