ಸೋಮವಾರ, ಜನವರಿ 20, 2020
20 °C

ಜೆಎನ್‌ಯು ದಾಂದಲೆ: ಮಹಾರಾಷ್ಟ್ರದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಚಿವರ ಸಾಥ್

ಪಿಟಿಐ Updated:

ಅಕ್ಷರ ಗಾತ್ರ : | |

 candle-light protest to condemn the violence at JNU, in Mumbai

ಮುಂಬೈ: ದೆಹಲಿಯ ಪ್ರತಿಷ್ಠಿತ ವಿಶ್ವವಿದ್ಯಾಲಯ ಜೆಎನ್‌ಯುನಲ್ಲಿ ಭಾನುವಾರ ನಡೆದ ದಾಂದಲೆ ಖಂಡಿಸಿ ಮುಂಬೈನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಹಾರಾಷ್ಟ್ರದ ಸಚಿವ ಜಿತೇಂದ್ರ ಅವಹದ್ ಸಾಥ್ ನೀಡಿದ್ದಾರೆ.

ಜೆಎನ್‌ಯು ದಾಂದಲೆ ಖಂಡಿಸಿ ಮುಂಬೈಯಲ್ಲಿ ವಿದ್ಯಾರ್ಥಿಗಳು ಭಾನುವಾರ ರಾತ್ರಿ ಮೇಣದ ಬತ್ತಿ ಹಿಡಿದು   ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆ ಜತೆ ಕೈಜೋಡಿಸಿದ ಸಚಿವರು, ಜನ ವಿಚಾರವಂತರಿಗೆ ಹೆದರುತ್ತಾರೆ ಎಂದರೆ ಅಲ್ಲಿ ಅರಾಜಕತೆ ಇದೆ ಎಂದು ಹೇಳಿದ್ದಾರೆ. 

ಜೆಎನ್‌ಯು ವಿದ್ಯಾರ್ಥಿ ಮತ್ತು ಶಿಕ್ಷಕರ ಮೇಲೆ ಯೋಜಿತ ದಾಳಿ ನಡೆಸಲಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ದಮನ ಮಾಡುವುದಕ್ಕಾಗಿ  ಹಿಂಸಾಚಾರ ಮಾಡಲಾಗಿದೆ. ಇದಕ್ಕೆ ಯಾವತ್ತೂ ಜಯ ಸಿಗುವುದಿಲ್ಲ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

ಇದನ್ನೂ ಓದಿ: ಜೆಎನ್‌ಯು ಮೇಲಿನ ದಾಳಿ 26/11ರ ಉಗ್ರರ ದಾಳಿಯನ್ನು ನೆನಪಿಸಿತು: ಉದ್ಧವ್ ಠಾಕ್ರೆ

ಮಹಾರಾಷ್ಟ್ರದಲ್ಲಿರುವ ವಿದ್ಯಾರ್ಥಿಗಳು ಸುರಕ್ಷಿತ ಎಂದು ಭರವಸೆ ನೀಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಈ ರೀತಿಯ ನಡೆಗಳನ್ನು ಸಹಿಸುವುದಿಲ್ಲ. ಜೆಎನ್‌ಯು ಮೇಲಿನ ದಾಳಿ 26/11ರ ಉಗ್ರರ ದಾಳಿಯನ್ನು ನೆನಪಿಸಿತು ಎಂದಿದ್ದಾರೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು