ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಹೋಟೆಲ್‌ನಿಂದ ಹೋಟೆಲ್‌ಗೆ ವಾಸ್ತವ್ಯ, ಸರ್ಪಗಾವಲಿನಲ್ಲಿ ಶಾಸಕರು

Last Updated 24 ನವೆಂಬರ್ 2019, 17:02 IST
ಅಕ್ಷರ ಗಾತ್ರ

ಮಹಾರಾಷ್ಟ್ರ: ಕರ್ನಾಟಕದಲ್ಲಿ ನಡೆದಂತೆ ಈಗ ಮಹಾರಾಷ್ಟ್ರದಲ್ಲೂ ರೆಸಾರ್ಟ್ ರಾಜಕಾರಣಕ್ಕೆ ಸಾಕ್ಷಿಯಾಗಿದ್ದು, ಅಧಿಕಾರ ಉಳಿಸಿಕೊಳ್ಳಲು ಒಂದೆಡೆ ಬಿಜೆಪಿ ಹಾಗೂಎನ್‌ಸಿಪಿ ಪಕ್ಷದ ಮುಖಂಡ ಅಜಿತ್ ಪವಾರ್ ಕಸರತ್ತು ನಡೆಸುತ್ತಿದ್ದರೆ, ಮತ್ತೊಂದೆಡೆಕಾಂಗ್ರೆಸ್ ಹಾಗೂ ಎನ್‌ಸಿಪಿ ಪಕ್ಷಗಳು ತಮ್ಮ ಶಾಸಕರನ್ನು ಭದ್ರತೆಯ ಕಾರಣ ನೀಡಿ ಹೋಟೆಲ್‌ನಿಂದ ಹೋಟೆಲ್‌ಗೆ ವಾಸ್ತವ್ಯ ಬದಲಾಯಿಸುತ್ತಿವೆ.

ಯಾವ ಕ್ಷಣದಲ್ಲಿ ಏನು ಬೇಕಾದರೂ ನಡೆಯಬಹುದು ಎಂಬ ಮಾತುಗಳಿಗೆಮಹಾರಾಷ್ಟ್ರರಾಜಕಾರಣದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಘಟನೆಗಳು ಸಾಕ್ಷಿಯಾಗುತ್ತಿವೆ. ಮಹಾರಾಷ್ಟ್ರ ಸರ್ಕಾರ ರಚನೆ ಕುರಿತುಸುಪ್ರೀಂ ಕೋರ್ಟ್ ಸೋಮವಾರ ನೀಡುವ ತೀರ್ಪಿನ ಮೇಲೆ ಎಲ್ಲರ ಚಿತ್ತವಿದೆ.

ಈ ನಡುವೆ ಎನ್‌ಸಿಪಿ ಶಾಸಕ ಧನಂಜಯ್ ಮುಂಡೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ 'ನಾನು ಯಾವತ್ತೂ ಪವಾರ್ ಜೊತೆಯಲ್ಲಿ ಇದ್ದೇನೆ. ಯಾಕೆ ಗಾಳಿ ಸುದ್ದಿ ಹರಡುತ್ತಿದ್ದೀರಾ?' ಎಂದು ಹೇಳಿಕೆ ನೀಡಿದ್ದಾರೆ.ಈ ಹೇಳಿಕೆಯನ್ನು ಎಎನ್ಐ ಸುದ್ದಿ ಸಂಸ್ಥೆಪ್ರಕಟಿಸಿದ್ದು ಟ್ವಿಟಿಗರು 'ಯಾವ ಪವಾರ್ ಜೊತೆ ಎಂಬುದನ್ನು ತಿಳಿಸಿ?' ಎಂದು ವ್ಯಂಗ್ಯದ ಧಾಟಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಈ ನಡುವೆ ಮುಂಬಯಿಯಲ್ಲಿ ಕಾಂಗ್ರೆಸ್ ಶಾಸಕರು ತಂಗಿರುವ ಹೋಟೆಲಿನಲ್ಲಿ ಪಕ್ಷದ ಮುಖಂಡರಾದ ಅಹ್ಮದ್ ಪಟೇಲ್, ಮಲ್ಲಿಕಾರ್ಜುನಖರ್ಗೆ, ಎನ್‌ಸಿಪಿ ಮುಖಂಡ ಶರದ್ ಪವಾರ್, ಶಿವಸೇನಾ ಸಂಸದ ಸಂಜಯ್ ರಾವುತ್ಜಂಟಿ ಸಭೆ ನಡೆದಿಸಿದ್ದು ಮುಂದಿನ ನಡೆ ಬಗ್ಗೆಗಂಭೀರ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಈ ಮಧ್ಯೆ ಯುವ ಸ್ವಾಭಿಮಾನ ಪಕ್ಷದ ಶಾಸಕ ರವಿರಾಣಾ ಕಳೆದ ಅವಧಿಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದು, ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಭಾನುವಾರ ಭೇಟಿ ಮಾಡಿ ಶುಭಾಶಯ ಕೋರಿದ್ದಾರೆ. ಅಲ್ಲದೆ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಈಗ ಒಳ್ಳೆಯ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಹೊಂದಿದೆ. ಶಿವಸೇನಾದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದಾಗಿ 175ಕ್ಕೂ ಹೆಚ್ಚು ಮಂದಿ ಶಾಸಕರು ಈಗ ಬಿಜೆಪಿಯ ಜೊತೆಗಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT