ಗುರುವಾರ , ಅಕ್ಟೋಬರ್ 17, 2019
27 °C

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ: ನಾಗ್ಪುರ್‌ದಿಂದ ಫಡಣವೀಸ್ ಸ್ಪರ್ಧೆ

Published:
Updated:

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾಗಿದೆ. ಮಹಾರಾಷ್ಟ್ರದಲ್ಲಿನ ಒಟ್ಟು 288 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲಿದ್ದು 125  ಚುನಾವಣಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ  ಮಾಡಿದೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ನಾಗ್ಪುರ್ ನೈರುತ್ಯ ಚುನಾವಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ  ಬಿಜೆಪಿ - ಶಿವಸೇನೆಯೊಂದಿಗೆ  ಸೀಟು ಹಂಚಿಕೆ ಮಾಡಲಿದೆ.

ಇದನ್ನೂ ಓದಿ: ಮಹಾರಾಷ್ಟ್ರ: ಕಣಕ್ಕೆ ಇಳಿಯಲಿದೆ ಎಂಎನ್‌ಎಸ್‌

ಮಹಾರಾಷ್ಟ್ರದ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಕೋತ್ರುಡ್  ಚುನಾವಣಾ ಕ್ಷೇತ್ರದಿಂದ ಸ್ಪರ್ಧೆಗಿಳಿಯಲಿದ್ದಾರೆ.  ಬಿಜೆಪಿ ಪ್ರಕಟಿಸಿದ  ಅಭ್ಯರ್ಥಿಗಳ ಪಟ್ಟಿಯಲ್ಲಿ 12 ಮಹಿಳೆಯರಿಗೂ ಸ್ಥಾನ ನೀಡಲಾಗಿದೆ. 

ಅಕ್ಟೋಬರ್ 21ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಸ್ಪರ್ಧೆಗಿಳಿಯುವುದಾಗಿ ಎರಡೂ ಪಕ್ಷಗಳು ಸೋಮವಾರ ಹೇಳಿದ್ದವು. ಆದಾಗ್ಯೂ, ಶಿವಸೇನೆ ಎಷ್ಟು ಸೀಟುಗಳಲ್ಲಿ ಸ್ಪರ್ಧಿಸಲಿದೆ ಎಂಬುದರ ಬಗ್ಗೆ ಎರಡೂ ಪಕ್ಷಗಳು ಮಾತೆತ್ತಿಲ್ಲ.

ಬಿಜೆಪಿ 145 ಸೀಟುಗಳಲ್ಲಿ ಮತ್ತು ಶಿವಸೇನೆ 125 ಸೀಟುಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.  ಇನ್ನುಳಿದ ಸೀಟುಗಳಲ್ಲಿ  ಕೇಂದ್ರ ಸಚಿವ  ರಾಮದಾಸ್ ಅಠವಾಳೆ ಅವರ ರಿಪಬ್ಲಿಕನ್  ಪಾರ್ಟಿ ಆಫ್ ಇಂಡಿಯಾ ಸೇರಿದಂತೆ ಇತರ ಪಕ್ಷಗಳು ಸ್ಪರ್ಧಿಸಲಿದೆ.
 

Post Comments (+)