ಗುರುವಾರ , ಆಗಸ್ಟ್ 22, 2019
27 °C

ನಟ ಮಹೇಶ್ ಬಾಬು ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ ಜಿಎಸ್‍ಟಿ ಇಲಾಖೆ

Published:
Updated:

ಹೈದರಾಬಾದ್: ಸೇವಾ ತೆರಿಗೆ ಪಾವತಿ ಮಾಡದ ತೆಲುಗು ನಟ ಮಹೇಶ್ ಬಾಬು ಅವರ ಬ್ಯಾಂಕ್ ಖಾತೆಗಳನ್ನು ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಇಲಾಖೆ ನಿಷ್ಕ್ರಿಯಗೊಳಿಸಿದೆ.

ಮಹೇಶ್ ಬಾಬು ಅವರು  2007-08ರ ಅವಧಿಯಲ್ಲಿ ಹಲವಾರು ಬ್ರಾಂಡ್‍ಗಳ ರಾಯಭಾರಿಯಾಗಿದ್ದು, ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಆದರೆ ಅವರು ಸೇವಾ ತೆರಿಗೆ ಪಾವತಿ ಮಾಡಿಲ್ಲ. ಅವರು ಪಾವತಿ ಮಾಡಬೇಕಾದ ಒಟ್ಟು ಮೊತ್ತ  ₹18.5 ಲಕ್ಷ ಆಗಿತ್ತು. ಆದರೆ ಅದರ ಮೇಲೆ ತೆರಿಗೆ, ಬಡ್ಡಿ ಮತ್ತು ಜುಲ್ಮಾನೆ ಸೇರಿ  ₹73.5 ಲಕ್ಷ ಆಗಿದೆ. ಹಾಗಾಗಿ ಅವರ ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಖಾತೆಯ ವಹಿವಾಟುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಹೈದರಾಬಾದ್ ಜಿಎಸ್‍ಟಿ ಕಮಿಷನರ್ ಕಚೇರಿ ಪತ್ರಿಕಾ ಪ್ರಟಣೆ ಹೊರಡಿಸಿದೆ.

ಈ ಪ್ರಕರಣದಲ್ಲಿ ಮಹೇಶ್ ಬಾಬು ನಮಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ, ಹಾಗಾಗಿ ಅವರ ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯಗೊಳಿಸಿ ಹಣ ವಸೂಲಿ ಪ್ರಕ್ರಿಯೆ ಆರಂಭಿಸಿದ್ದೇವೆ. ನಾವು ಆಕ್ಸಿಸ್ ಬ್ಯಾಂಕ್ ನಿಂದ ₹42 ಲಕ್ಷ ವಸೂಲಿ ಮಾಡಿದ್ದು, ನಾಳೆ ಐಸಿಐಸಿಐ ಬ್ಯಾಂಕ್‍ ಖಾತೆಯಿಂದ ವಸೂಲಿ ಮಾಡಲಾಗುವುದು. ಇಲ್ಲದೇ ಇದ್ದರೆ ಐಸಿಐಸಿಐ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗುರುವಾರ ಅಧಿಕಾರಿಯೊಬ್ಬರು ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜಿಎಸ್‍ಟಿ ಇಲಾಖೆಗೆ ತೆರಿಗೆ ಪಾವತಿ ಮಾಡುವವರೆಗೆ ಮಹೇಶ್ ಬಾಬು ಅವರಿಗೆ ಬ್ಯಾಂಕ್ ಖಾತೆಗಳ ವಹಿವಾಟು ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

Post Comments (+)