ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌ನಿಂದ ಕಾರು ದುಬಾರಿ

Last Updated 28 ಮಾರ್ಚ್ 2019, 19:00 IST
ಅಕ್ಷರ ಗಾತ್ರ

ನವದೆಹಲಿ: ಮಹೀಂದ್ರಾ, ಟಾಟಾ, ರೆನೊ, ಟೊಯೋಟ ಕಂಪನಿಗಳ ವಾಹನಗಳ ಬೆಲೆಗಳು ಏಪ್ರಿಲ್‌ನಿಂದ ಹೆಚ್ಚಾಗಲಿವೆ.

ಯುಟಿಲಿಟಿ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಯು ಏಪ್ರಿಲ್‌ನಿಂದ ತನ್ನ ಪ್ರಯಾಣಿಕ ವಾಹನಗಳ ಬೆಲೆಯನ್ನು ₹ 5 ಸಾವಿರದಿಂದ ₹ 73 ಸಾವಿರದವರೆಗೂ ಏರಿಕೆ ಮಾಡಲಿದೆ.

ತಯಾರಿಕಾ ವೆಚ್ಚದಲ್ಲಿ ಏರಿಕೆ ಆಗುತ್ತಿರುವುದರಿಂದ ಶೇ 0.5 ರಿಂದ ಶೇ 2.7ರವರೆಗೂ ಬೆಲೆ ಏರಿಕೆಗೆ ನಿರ್ಧರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಟಾಟಾ ಮೋಟರ್ಸ್‌ ₹ 25 ಸಾವಿರದವರೆಗೆ ಬೆಲೆ ಏರಿಸಲಿದೆ. ರೆನೊ ಕ್ವಿಡ್ ಶೇ 3ರಷ್ಟು ದುಬಾರಿಯಾಗಲಿದೆ. ಟೊಯೋಟದ ವಿವಿಧ ವಾಹನಗಳು ಮತ್ತು ಜಾಗ್ವಾರ್‌ ಲ್ಯಾಂಡ್‌ ರೋವರ್‌ ಬೆಲೆಯೂ ಹೆಚ್ಚಳಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT