ಗುರುವಾರ , ಏಪ್ರಿಲ್ 2, 2020
19 °C

ಕೊರೊನಾ ವೈರಸ್‌ ಕುರಿತ ಪ್ರಮುಖ ಬೆಳವಣಿಗೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

*ನೆರೆ ರಾಜ್ಯ ಕೇರಳದಲ್ಲಿ ಮಾರ್ಚ್‌ 31ರವರೆಗೆ ಲಾಕ್‌ಡೌನ್‌. ಗಡಿಯಲ್ಲಿರುವ ರಸ್ತೆಗಳು ಸಂಪೂರ್ಣ ಬಂದ್‌. ಸರ್ಕಾರಿ ಹಾಗೂ ಖಾಸಗಿ ಬಸ್‌ಗಳ ಓಡಾಟಕ್ಕೆ ನಿರ್ಬಂಧ. ಖಾಸಗಿ ವಾಹನಗಳಿಗೆ ವಿನಾಯಿತಿ.

*ಈಶಾನ್ಯ ಭಾರತ ಜನರನ್ನು ಸೋಂಕಿತರು ಎಂದು ಹೀಯಾಳಿಸಿ ಪೀಡಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರಗಳಿಗೆ ಸೂಚಿಸಿದ ಕೇಂದ್ರ ಗೃಹ ಸಚಿವಾಲಯ. ದೆಹಲಿಯಲ್ಲಿ ಮಣಿಪುರ ಮೂಲದ ಮಹಿಳೆಯೊಬ್ಬರ ಮೇಲೆ ವ್ಯಕ್ತಿಯೊಬ್ಬ ಉಗಿದು, ಕೊರೊನಾ ಎಂದು ಕರೆದ ಘಟನೆ ಬೆನ್ನಲ್ಲೇ ಕೇಂದ್ರದ ಕ್ರಮ  

*ಬಡವರಿಗೆ ಉಚಿತ ಆಹಾರ ಹಾಗೂ ಔಷಧಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹20 ಕೋಟಿ ಮಂಜೂರು ಮಾಡಿದ ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌. ಪರಿಹಾರ ನಿಧಿಗೆ ಒಂದು ತಿಂಗಳ ವೇತನ ನೀಡುವುದಾಗಿ ಘೋಷಿಸಿದ ಪಂಜಾಬ್‌ ಸಚಿವರು. ಪಂಜಾಬ್‌ ಐಎಎಸ್‌ ಅಧಿಕಾರಿಗಳೂ ನಿಧಿಗೆ ಒಂದು ತಿಂಗಳ ವೇತನ ನೀಡಲಿದ್ದಾರೆ 

*ಪುದುಚೇರಿಯಲ್ಲೂ ಮಾರ್ಚ್‌ 31ರವರೆಗೆ ‘ಕರ್ಫ್ಯೂ’ ಹೇರಿಕೆ; ಮುಖ್ಯಮಂತ್ರಿ ವಿ. ನಾರಾಯಣಸಾಮಿ ಘೋಷಣೆ 

*ಮಾರ್ಚ್‌ 24ರಿಂದ ಮುಂದಿನ ಆದೇಶದವರೆಗೆ ಏಮ್ಸ್‌ ಆಸ್ಪತ್ರೆ ಹೊರರೋಗಿ ವಿಭಾಗ ಬಂದ್‌. ಆಸ್ಪತ್ರೆ ಆವರಣದಲ್ಲಿ ಹೆಚ್ಚಿನ ಜನರು ಸೇರಬಾರದು ಎನ್ನುವ ಉದ್ದೇಶದಿಂದ ಕ್ರಮ 

*ಸಿಆರ್‌ಪಿಸಿ ಸೆಕ್ಷನ್‌ 144 ಹಾಕಿದರೂ, ಮುಂಬೈನ ರಸ್ತೆಗಳಲ್ಲಿ ಜನರ ಓಡಾಟ. ಕೋವಿಡ್‌ 19 ವಿರುದ್ಧದ ಹೋರಾಟವನ್ನು ಗಂಭೀರವಾಗಿ ಪರಿಗಣಿಸುವಂತೆ ಜನರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಕರೆ

*ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳಕ್ಕೆ ಇತರೆ ರಾಜ್ಯಗಳಿಂದ ಆಗಮಿಸುವ ವಿಮಾನಗಳನ್ನು ಸ್ಥಗಿತಗೊಳಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ. ಪ್ರಧಾನಿ ಪತ್ರ ಬರೆದ ಮುಖ್ಯಮಂತ್ರಿ 

*ರಾಜ್ಯದಾದ್ಯಂತ 350 ‘ಕಿಚಿಡಿ’ ಕೇಂದ್ರಗಳನ್ನು ತೆರೆಯುವುದಾಗಿ ಜಾರ್ಖಂಡ್‌ ಸರ್ಕಾರದ ಘೋಷಣೆ. ಲಾಕ್‌ಡೌನ್‌ ಸಂದರ್ಭದಲ್ಲಿ ಬಡವರಿಗೆ ಈ ಕೇಂದ್ರಗಳಲ್ಲಿ ಊಟದ ವ್ಯವಸ್ಥೆ  

*ಸೋಮವಾರ ಮೂರು ಪ್ರಕರಣಗಳ ವಿಚಾರಣೆಯನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಎಸ್‌.ಎ.ಬೊಬಡೆ ಹಾಗೂ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಅವರಿದ್ದ ನ್ಯಾಯಪೀಠ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು