ಕೇರಳ: ನಾಲ್ಕು ವರ್ಷಗಳ ನಂತರ ಮಲಂಬುಳ ಅಣೆಕಟ್ಟಿನಿಂದ ಹರಿಯಿತು ನೀರು

7

ಕೇರಳ: ನಾಲ್ಕು ವರ್ಷಗಳ ನಂತರ ಮಲಂಬುಳ ಅಣೆಕಟ್ಟಿನಿಂದ ಹರಿಯಿತು ನೀರು

Published:
Updated:

ಪಾಲಕ್ಕಾಡ್ : ನಾಲ್ಕು ವರ್ಷಗಳ ನಂತರ  ಕೇರಳದ ಮಲಂಬುಳ ಅಣೆಕಟ್ಟಿನ ಸ್ಪಿಲ್ ವೇ ಶಟರ್ ತೆರೆಯಲಾಗಿದೆ. ಬುಧವಾರ ಬೆಳಗ್ಗೆ  11.45ಕ್ಕೆ ಮೊದಲ ಹಂತದಲ್ಲಿ ಒಂದೊಂದೇ ಶಟರ್ ತೆರೆಯಲಾಗಿದೆ. ಮಲಂಬುಳ ಅಣೆಕಟ್ಟಿಗೆ ನಾಲ್ಕು ಶಟರ್ ಇದ್ದು, ಹಂತ ಹಂತವಾಗಿ ನೀರು ಬಿಡಲಾಗುತ್ತಿದೆ.

115.06 ಮೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ  ಈ ಅಣೆಕಟ್ಟಿನಲ್ಲಿ ನೀರಿನ ಮಟ್ಟ 114.86 ಮೀಟರ್ ತಲುಪಿದ್ದರಿಂದ ಶಟರ್ ತೆರೆದು ನೀರು ಬಿಡಲಾಗಿದೆ. ಇಲ್ಲಿಂದ ಬಿಟ್ಟ ನೀರು ಮುಕ್ಕೇಪ್ಪುಳ ಮೂಲಕ ಕಲ್ಪತ್ತಿಪ್ಪುಳ ಸೇರಿ ಪರಳಿಯಿಂದ ಭಾರತಪ್ಪುಳಕ್ಕೆ ಸೇರಲಿದೆ.

ಈ ನದಿಯ ದಡದಲ್ಲಿ ವಾಸಿಸುವವರು ಎಚ್ಚರ ವಹಿಸಬೇಕೆಂದು ಅಧಿಕೃತರು ಹೇಳಿದ್ದಾರೆ. ಇನ್ನೆರಡು ದಿನಗಳಲ್ಲಿ ಕೇರಳದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಶುಕ್ರವಾರ ಶಟರ್ ಮುಚ್ಚುವ  ಸಾಧ್ಯತೆ ಇದೆ.

ಈ ಹಿಂದೆ 2013, 2014ರಲ್ಲಿ  ನೀರಿನ ಮಟ್ಟ ಜಾಸ್ತಿಯಾದಾಗ ಶಟರ್ ತೆರೆಯಲಾಗಿತ್ತು. 2013ರಲ್ಲಿ ಆಗಸ್ಟ್ 15ರಂದು ನವಂಬರ್ 8ರ ವರೆಗೆ, 2014ರಲ್ಲಿ ಸೆಪ್ಟೆಂಬರ್ 6- ಅಕ್ಟೋಬರ್ 27ರವರೆಗೆ ಅಣೆಕಟ್ಟಿನ ಶಟರ್ ತೆರೆಯಲಾಗಿತ್ತು. ನಂತರದ ವರ್ಷಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿತ್ತು. ಕಳೆದ ವರ್ಷ ಎರಡನೇ ಬೇಸಾಯಕ್ಕೆ 90ದಿನಗಳ ಕಾಲ ನೀರು ಬೇಕು ಎಂದು ರೈತರು ಕೇಳಿದ್ದರೂ ಅಷ್ಟು ದಿನ ಹರಿಬಿಡವಷ್ಟು ನೀರು ಅಣೆಕಟ್ಟಿನಲ್ಲಿರಲಿಲ್ಲ. 2011 ಮತ್ತು  2013ರ ಜುಲೈ ತಿಂಗಳಲ್ಲಿ ನೀರಿನ ಮಟ್ಟ 113 ಮೀಟರ್ ಇತ್ತು.

ಸೆಲ್ಫಿಗೆ ನಿಷೇಧ
ಮಲಂಬುಳ ಅಣೆಕಟ್ಟು ತೆರೆದು ಬಿಡುವ ಹೊತ್ತಲ್ಲಿ ಹತ್ತಿರದ ನದಿ ಬಳಿ, ಸೇತುವೆಯಲ್ಲಿ ಗುಂಪು ಸೇರುವುದು, ಸೆಲ್ಫಿ ತೆಗೆಯುವುದು ನಿಷೇಧಿಸಲಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ (ಡಿಟಿಪಿಸಿ) ಅಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !