ಆರೋಪಿಗೆ ಮೆಮೊರಿ ಕಾರ್ಡ್‌ ಪ್ರತಿ ನೀಡಲು ಸುಪ್ರೀಂ ಕೋರ್ಟ್‌ ಸಮ್ಮತಿ

7
ನಟಿಗೆ ಕಿರುಕುಳ ಪ್ರಕರಣ

ಆರೋಪಿಗೆ ಮೆಮೊರಿ ಕಾರ್ಡ್‌ ಪ್ರತಿ ನೀಡಲು ಸುಪ್ರೀಂ ಕೋರ್ಟ್‌ ಸಮ್ಮತಿ

Published:
Updated:

ನವದೆಹಲಿ: ನಟಿಯೊಬ್ಬರಿಗೆ ಕಿರುಕುಳ ನೀಡಿದ ಪ್ರಕರಣದ ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆಗೆ ಸಹಾಯವಾಗುವುದಾದರೆ, ಆರೋಪಿ ನಟ ದಿಲೀಪ್‌ಗೆ ಮೊಬೈಲ್ ಮೆಮೊರಿ ಕಾರ್ಡ್‌ನ ಪ್ರತಿ ನೀಡಬಹುದು ಎಂದು ಸುಪ್ರೀಂಕೋರ್ಟ್‌ ಹೇಳಿದೆ. 

‘ಪೊಲೀಸ್‌ ದಾಖಲೆಗಳ ಪ್ರಕಾರ, ಮೆಮೊರಿ ಕಾರ್ಡ್‌ ಪ್ರಕರಣದ ಸಾಕ್ಷ್ಯವಾಗಿದ್ದರೆ, ಇದರ ಪ್ರತಿಯನ್ನು ಆರೋಪಿಗೆ ನೀಡುವುದರಲ್ಲಿ ತಪ್ಪಿಲ್ಲ’ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿ ಎ.ಎಂ. ಖಾನ್‌ವಿಲ್ಕರ್‌ ಮತ್ತು ಹೇಮಂತ್‌ ಗುಪ್ತಾ ಅವರನ್ನು ಒಳಗೊಂಡ ಪೀಠ, ಪ್ರಕರಣದ ವಿಚಾರಣೆಯನ್ನು ಡಿಸೆಂಬರ್‌ 11ಕ್ಕೆ ಮುಂದೂಡಿದೆ. 

‘ಆರೋಪಿಗೆ ಮೆಮೊರಿ ಕಾರ್ಡ್‌ ನೀಡಿದರೆ, ನಟಿಯ ಘನತೆಗೆ ಧಕ್ಕೆ ಉಂಟಾಗುತ್ತದೆ’ ಎಂಬ ಕೇರಳ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ದಿಲೀಪ್‌ ಪರ ವಕೀಲ ಮುಕುಲ್‌ ರೋಹ್ಟಗಿ ಪ್ರಶ್ನಿಸಿದ್ದರು. 

‘ಯಾವುದೇ ಪ್ರಕರಣದ ‍ಪಾರದರ್ಶಕ ತನಿಖೆ ನಡೆಯಬೇಕು ಎಂದು ಒತ್ತಾಯಿಸುವುದು ಪ್ರತಿಯೊಬ್ಬರ ಸಾಂವಿಧಾನಿಕ ಹಕ್ಕು. ನಟಿಗೆ ದೌರ್ಜನ್ಯ ನೀಡಿರುವ ದೃಶ್ಯಗಳು ಸೆರೆಯಾಗಿವೆ ಎಂದು ಹೇಳಲಾಗಿರುವ ಮೆಮೊರಿ ಕಾರ್ಡ್‌ನ ಪ್ರತಿ ನೀಡಿದರೆ ತನಿಖೆಗೆ ಸಹಕಾರಿಯಾಗುವುದು’ ಎಂದು ರೋಹ್ಟಗಿ ಮನವಿ ಮಾಡಿದರು. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್‌ರನ್ನು ಕಳೆದ ಜುಲೈ 10ರಂದು ಬಂಧಿಸಲಾಗಿತ್ತು. ಅಕ್ಟೋಬರ್‌ನಲ್ಲಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !