‘ಹಿಂದೂಗಳ ಹೆಸರಲ್ಲಿ ಸುಳ್ಳು’: ಬಿಜೆಪಿ ವಿರುದ್ಧ ಮಮತಾ ಗುಡುಗು

7

‘ಹಿಂದೂಗಳ ಹೆಸರಲ್ಲಿ ಸುಳ್ಳು’: ಬಿಜೆಪಿ ವಿರುದ್ಧ ಮಮತಾ ಗುಡುಗು

Published:
Updated:

ಪುರ್ಬಾ ಮೇದಿನಿಪುರ್‌: ಬಿಜೆಪಿಯು ಹಿಂದೂಗಳ ಹೆಸರಿನಲ್ಲಿ ಸುಳ್ಳು ಹೇಳುತ್ತಿರುವ ಪಕ್ಷ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹರಿಹಾಯ‌್ದಿದ್ದಾರೆ.

ಜಿಲ್ಲೆಯಲ್ಲಿ ಬುಧವಾರ ನಡೆದ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತೃಣ ಮೂಲ ಕಾಂಗ್ರೆಸ್‌(ಟಿಎಂಸಿ) ಪಕ್ಷದ ಮುಖ್ಯಸ್ಥೆ ಮಮತಾ, ‘ಅಸ್ಸಾಂನಲ್ಲಿ 40 ಲಕ್ಷ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ. ಅದರಲ್ಲಿದ್ದ 23 ಲಕ್ಷ ಹಿಂದೂಗಳು ಬೆಂಗಾಳಿಗಳು. ಹಿಂದೂಗಳ ಹೆಸರಲ್ಲಿ ಸುಳ್ಳು ಹೇಳುತ್ತಿರುವವರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು’ ಎಂದು ಗುಡುಗಿದರು.

ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಅಂತಿಮ ಪಟ್ಟಿಯ ವಿರುದ್ಧ ನವೆಂಬರ್‌ 16ರಂದು ಮಾತನಾಡಿದ್ದ ಅವರು, ಎನ್‌ಆರ್‌ಸಿ ವಿರುದ್ಧ ಚಳುವಳಿ ಮುಂದುವರಿಸುವಂತೆ ಅಸ್ಸಾಂ ಜನರಿಗೆ ಕರೆ ನೀಡಿದ್ದರು. ಜೊತೆಗೆ ಟಿಎಂಸಿ ಬೆಂಬಲ ನೀಡುವುದಾಗಿ ಹೇಳಿದ್ದರು.

‘ಎನ್‌ಆರ್‌ಸಿ ಪಟ್ಟಿಯಿಂದ ನಿಜವಾದ ನಾಗರಿಕರ ಹೆಸರುಗಳನ್ನು ಕೈಬಿಡಲಾಗಿದೆ. ಅಸ್ಸಾಂ, ಬಿಹಾರ ಹಾಗೂ ಬಂಗಾಳಿಗಳನ್ನು ಬಲವಂತವಾಗಿ ಪಟ್ಟಿಯಿಂದ ಹೊರಹಾಕಲಾಗಿದೆ. ಪಟ್ಟಿಯಲ್ಲಿ ನಿಮ್ಮ ತಾಯಿಯ ಹೆಸರಿದೆ. ಆದರೆ, ತಂದೆಯ ಹೆಸರಿಲ್ಲ ಎಂಬುದನ್ನು ಸುಮ್ಮನೆ ಕಲ್ಪಿಸಿಕೊಳ್ಳಿ. ನಿಮ್ಮ ಮಗನ ಹೆಸರನ್ನು ಉಲ್ಲೇಖಿಸಲಾಗಿದೆ. ಆದರೆ, ಮಗಳ ಹೆಸರನ್ನು ಕೈಬಿಡಲಾಗಿದೆ ಎಂಬುದನ್ನು ಊಹಿಸಿ. ಪಟ್ಟಿಯ ನಿಜಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ’ ಎಂದು ಹೇಳಿದ್ದರು.

ಮುಂದುವರಿದ ಮಮತಾ, ‘ಬಿಜೆಪಿಯು ಇತಿಹಾಸ ತಿರುಚಬಲ್ಲದು. ಹೆಸರಿಗಳನ್ನು ಬದಲಿಸಬಹುದು. ಆದರೆ ಗೇಮ್‌ ಚೇಂಜರ್‌ ಆಗಲು ಸಾಧ್ಯವಿಲ್ಲ. ಸದ್ಯ ದೇಶದ ಸ್ಥಿತಿ ಆಪತ್ತಿನಲ್ಲಿದೆ’ ಎಂದಿದ್ದರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಎಲ್ಲ ವಿರೋಧ ಪಕ್ಷಗಳು ಒಂದಾಗಬೇಕು ಎಂದು ಕರೆ ನೀಡಿದ್ದರು.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 1

  Sad
 • 0

  Frustrated
 • 9

  Angry

Comments:

0 comments

Write the first review for this !