‘ಹಿರಣ್ಯಕಶಿಪು ವಂಶಸ್ಥೆ ಮಮತಾ’

ಬುಧವಾರ, ಜೂನ್ 19, 2019
22 °C

‘ಹಿರಣ್ಯಕಶಿಪು ವಂಶಸ್ಥೆ ಮಮತಾ’

Published:
Updated:

ಲಖನೌ: ‘ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹಿರಣ್ಯಕಶಿಪುವಿನ ವಂಶಸ್ಥರು’ ಎಂದು ಬಿಜೆಪಿಯ ಸಂಸದ
ಸಾಕ್ಷಿ ಮಹಾರಾಜ್‌ ಟೀಕಿಸಿದ್ದಾರೆ.

ಉತ್ತರಪ್ರದೇಶದ ಹರಿದ್ವಾರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಅನೌಪಚಾರಿಕ ಮಾತುಕತೆ ನಡೆಸಿದ ಅವರು, ‘ಜೈ ಶ್ರೀರಾಮ್‌ ಘೋಷಣೆ ಕೂಗಿದವರನ್ನು ಮಮತಾ ಜೈಲಿಗಟ್ಟುತ್ತಾರೆ. ಅವರಿಗೆ ಜೈಲಿನಲ್ಲಿ ಹಿಂಸೆ ನೀಡಲಾಗುತ್ತದೆ. ಇದನ್ನು ನೋಡಿದರೆ ಆಕೆ ಹಿರಣ್ಯಕಶಿಪುವಿನ ವಂಶಸ್ಥೆ ಎಂಬ ಭಾವನೆ ಬರುತ್ತದೆ’ ಎಂದರು.

‘ಹಿರಣ್ಯಕಶಿಪು ದೇವರ ನಾಮ ಸ್ಮರಣೆ ಮಾಡುವವರನ್ನು  ಜೈಲಿಗಟ್ಟುತ್ತಿದ್ದ. ತನ್ನ ಪುತ್ರನನ್ನೂ ಆತ ಜೈಲಿಗಟ್ಟಿದ್ದ. ಮಮತಾ ಸಹ ಅದೇ ಕೆಲಸ ಮಾಡುತ್ತಿದ್ದಾರೆ. ಈ ಕೃತ್ಯಕ್ಕೆ ಅವರು ರಾಜಕೀಯವಾಗಿ ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು  ಹೇಳಿದರು.

ವಿವಾದಕ್ಕೆ ಆಸ್ಪದವಾಗುವ ಹೇಳಿಕೆ ಯನ್ನು ಪಕ್ಷದ ಮುಖಂಡರು ನೀಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಈಚೆಗೆ ತಾಕೀತು ಮಾಡಿದ  ನಂತರವೂ ಇಂಥ ಹೇಳಿಕೆ ಹೊರಬಿದ್ದಿದೆ.

ಸಾಕ್ಷಿ ಅವರ ಹೇಳಿಕೆಗಳು ವಿವಾದಕ್ಕೆ ಗುರಿಯಾಗುವುದು ಹೊಸದಲ್ಲ. ‘ನನಗೆ ಮತ ನೀಡದಿದ್ದರೆ ಶಾಪಕ್ಕೆ ಗುರಿಯಾಗುತ್ತೀರಿ’ ಎಂದು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅವರು ಹೇಳಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 5

  Happy
 • 3

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !