ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಆಯೋಗ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ-ಪ್ರಧಾನಿ ಮೋದಿಗೆ ಮಮತಾ ಪತ್ರ

Last Updated 7 ಜೂನ್ 2019, 13:52 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದ'ನೀತಿ ಆಯೋಗ' ಸಭೆಯಲ್ಲಿ ಭಾಗವಹಿಸಿ ಪ್ರಯೋಜನವಿಲ್ಲ ಎಂದುಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಇದೇ ತಿಂಗಳ 15 ರಂದು ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ. ಅದೇ ರೀತಿ ಪಶ್ಚಿಮ ಬಂಗಾಳ ಮಮತಾ ಅವರಿಗೂ ನೀಡಲಾಗಿದೆ. ಆದರೆ, ನೀತಿ ಆಯೋಗಸಭೆಯಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಮತಾ ಪತ್ರ ಬರೆದಿದ್ದಾರೆ.

ರಾಜ್ಯಗಳಿಗೆ ನೀಡುವ ಹಣಕಾಸಿನ ಕುರಿತುನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀತಿ ಆಯೋಗಕ್ಕೆ ಇಲ್ಲ. ಕೇವಲ ಸಲಹೆ ನೀಡಬಹುದು ಅಷ್ಟೆ. ಇದರಿಂದ ಪ್ರಯೋಜನವಿಲ್ಲ. ಇದರಿಂದಾಗಿ ತಾನು ಪಾಲ್ಗೊಳ್ಳುವುದಿಲ್ಲ. ನಾಲ್ಕೂವರೆ ವರ್ಷದಿಂದ ನೀತಿ ಆಯೋಗದಕಾರ್ಯಕ್ರಮಗಳಿಂದ ಯಾವುದೇ ಪ್ರಯೋಜನವಾಗಿಲ್ಲ. ಆಯೋಗದಅಧಿಕಾರಿಗಳು ಕೇವಲ ಸಾರ್ವಜನಿಕವಾಗಿ ಹೇಳಿಕೆ ಕೊಡಲು ಮಾತ್ರ ಸಾಕು, ಇದರಿಂದ ರಾಜ್ಯಗಳಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ನೀತಿ ಆಯೋಗಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಸಭೆ ಸೇರಲಿದೆ. ಐದನೆ ಸಭೆ ಇದಾಗಿದ್ದು, ಕಳೆದ ಆಡಳಿತದ ಅವಧಿಯಲ್ಲಿ ನಾಲ್ಕು ಸಭೆಗಳನ್ನುನಡೆಸಿತ್ತು. ನಾಲ್ಕನೇ ಸಭೆಯಲ್ಲಿ ಮಮತಾ ಬ್ಯಾನರ್ಜಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT