‘ಮಮತಾ ಬ್ಯಾನರ್ಜಿ ಝಾನ್ಸಿ ರಾಣಿಯಲ್ಲ; ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್’

7
ಗಿರಿರಾಜ್‌ ಸಿಂಗ್ ಟೀಕೆ

‘ಮಮತಾ ಬ್ಯಾನರ್ಜಿ ಝಾನ್ಸಿ ರಾಣಿಯಲ್ಲ; ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್’

Published:
Updated:

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಆಧುನಿಕ  ಝಾನ್ಸಿ ರಾಣಿ ಎಂದಿದ್ದ ತೃಣ ಮೂಲ ಕಾಂಗ್ರೆಸ್‌ ಪಕ್ಷದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್, ಮಮತಾ ಅವರನ್ನು ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಅವರಿಗೆ ಹೋಲಿಕೆ ಮಾಡಿದ್ದಾರೆ.

ಕೇಂದ್ರ ಸರ್ಕಾರ ಹಾಗೂ ಬ್ರಿಟಿಷರ ಆಡಳಿತ ಕಾಲದ ಭಾರತವನ್ನು ಹೋಲಿಸಿ ಲೋಕಸಭೆಯಲ್ಲಿ ಗುರುವಾರ ಮಾತನಾಡಿದ್ದ ತೃಣಮೂಲ ಕಾಂಗ್ರೆಸ್‌ ಪಕ್ಷದ ನಾಯಕ ದಿನೇಶ್‌ ತ್ರಿವೇದಿ, ಮಮತಾ ಬ್ಯಾನರ್ಜಿ ಈ ಕಾಲದ ‘ ಝಾನ್ಸಿ ರಾಣಿ’ ಎಂದಿದ್ದರು.

ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಗಿರಿರಾಜ್‌ ಸಿಂಗ್‌, ‘ಬಹುಶ: ಇದು  ಝಾನ್ಸಿ ರಾಣಿ ಬಗೆಗಿನ ನಿಂದನಾತ್ಮಕ ಹೇಳಿಕೆಯಾಗಬಹುದು. ಮಮತಾ ಇಡೀ ಪಶ್ಚಿಮ ಬಂಗಾಳವನ್ನು ಹಾಳು ಮಾಡಿದ ರಾಕ್ಷಸಿ ಎನಿಸಬಹುದು. ಆಕೆ ತನ್ನ ವಿರುದ್ಧ ಮಾತನಾಡುವವರನ್ನು ಮುಗಿಸುವ ಕಿಮ್‌ ಜಾಂಗ್‌ ಉನ್‌ ರೀತಿ ಆಗಬಹುದು’ ಎಂದು ಟೀಕಿಸಿದ್ದಾರೆ.

‘ ಝಾನ್ಸಿ ರಾಣಿ ಅಥವಾ ಪದ್ಮಾವತಿಯವರಂತಾಗುವ ಶಕ್ತಿ ಮಮತಾಗಿಲ್ಲ.  ಝಾನ್ಸಿ ರಾಣಿ ದೇಶಕ್ಕಾಗಿ ಹೋರಾಡಿದವರು. ದೇಶದೊಳಕ್ಕೆ ನುಸುಳುತ್ತಿರುವ ರೋಹಿಂಗ್ಯಾಗಳನ್ನು ಬೆಂಬಲಿಸುವ ಮಮತಾ, ದೇಶ ಒಡೆಯಲು ಹೋರಾಟ ನಡೆಸುತ್ತಿದ್ದಾರೆ’ ಎಂದು ದೂರಿದರು.

ಕೋಲ್ಕತ್ತ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ಸಿಬಿಐ ಅಧಿಕಾರಿಗಳು ಪ್ರಶ್ನಿಸಲು ಯತ್ನಿಸಿದ್ದನ್ನು ಖಂಡಿಸಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಾನುವಾರ ತಡರಾತ್ರಿ ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದರು. ಕಮಿಷನರ್‌ ನಿವಾಸಕ್ಕೆ ತೆರಳಲು ಸಿಬಿಐ ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ. ಬಳಿಕ ಈ ವಿಚಾರ ರಾಷ್ಟ್ರದ ಗಮನ ಸೆಳೆದಿತ್ತು.

ಸಂಬಂಧಪಟ್ಟ ಸುದ್ದಿಗಳು

ಪಶ್ಚಿಮ ಬಂಗಾಳದಲ್ಲಿ ಸಿಬಿಐ ಅಧಿಕಾರಿಗಳನ್ನೇ ವಶಕ್ಕೆ ತೆಗೆದುಕೊಂಡ ಪೊಲೀಸರು

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಿಬಿಐ: ಮಂಗಳವಾರ ವಿಚಾರಣೆ

ಕೇಂದ್ರದ ಧೋರಣೆ ವಿರುದ್ಧ ಮಮತಾ ಧರಣಿ

ನನ್ನ ಪ್ರಾಣ ಕೊಡಲು ಸಿದ್ಧ, ಆದರೆ ರಾಜಿ ಮಾಡಿಕೊಳ್ಳುವುದಿಲ್ಲ: ಮಮತಾ ಬ್ಯಾನರ್ಜಿ

ಮುಂದುವರಿದ ಮಮತಾ ಧರಣಿ; ಲೋಕಸಭೆಯಲ್ಲಿ ಪ್ರತಿಧ್ವನಿಸಿದ ಬಿಜೆಪಿ ಹಟಾವೋ ಘೋಷಣೆ

ಸುಪ್ರೀಂ ಆದೇಶ ’ನೈತಿಕ ಗೆಲುವು’– ಮಮತಾ, ’ಸಿಬಿಐನ ನೈತಿಕ ಗೆಲುವು’–ಕೇಂದ್ರ

ಮೋದಿ ಮತ್ತೊಮ್ಮೆ ಅಧಿಕಾರಕ್ಕೇರುವುದಿಲ್ಲ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸರ್ಕಾರದ ನಡೆ ಅಪಾಯಕಾರಿ: ಕೇಜ್ರಿವಾಲ್

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದ ಮುಖ್ಯಮಂತ್ರಿಗಳಿವರು

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !