7

ಪತ್ನಿಯನ್ನು ಕೊಂದು ಮೃತದೇಹವನ್ನು 7 ತುಂಡು ಮಾಡಿ ಪ್ಯಾಕ್ ಮಾಡಿದ ಪತಿ!

Published:
Updated:

ನವದೆಹಲಿ: ಪತ್ನಿಯನ್ನು ಕೊಂದು ಮೃತದೇಹವನ್ನು ಪ್ಯಾಕ್ ಮಾಡಿ ನಿರ್ಜನ ಪ್ರದೇಶದಲ್ಲಿ ಎಸೆದಿದ್ದ ವ್ಯಕ್ತಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆಗ್ನೇಯ ದೆಹಲಿ ನಿವಾಸಿಯಾದ ಎಂಜಿನಿಯರ್ ತಮ್ಮ ಪತ್ನಿ ಜೂಹಿ (27) ಎಂಬಾಕೆಯನ್ನು ಹತ್ಯೆ ಮಾಡಿದ್ದರು. ಜೂಹಿಯ ಮೃತದೇಹ ಜೂನ್ 21ರಂದು ಪತ್ತೆಯಾಗಿತ್ತು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಹಣಕಾಸಿನ ವಿಷಯ ಮತ್ತು ವಿವಾಹೇತರ ಸಂಬಂಧದ ಬಗ್ಗೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು, ಇದೇ ಕಾರಣದಿಂದ ಜೂಹಿಯನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈಕೆಯನ್ನು ಹತ್ಯೆ ಮಾಡಲು ಬಂಧಿತ ಆರೋಪಿಯ ಸಹೋದರರಿಬ್ಬರು ಸಹಾಯ ಮಾಡಿದ್ದು, ಅವರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ಸಾಜಿದ್ ಅಲಿ ಅನ್ಸಾರಿ ಕುರುಕ್ಷೇತ್ರದಲ್ಲಿರುವ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದಾರೆ. ಸಾಜಿದ್ ಜತೆ ಆತನ ಸಹೋದರರಾದ ಹಸ್ಮತ್ ಅಲಿ ಅನ್ಸಾರಿ ಮತ್ತು ಮೊಹಮ್ಮದ್ ಇಷ್ತಿಯಾಕ್‍ನ್ನು ಬಂಧಿಸಲಾಗಿದೆ.

ಜೂಹಿಯ ಮೃತದೇಹವನ್ನು ಏಳು ತುಂಡು ಮಾಡಿ ರಟ್ಟಿನ ಪೆಟ್ಟಿಗೆಯಲ್ಲಿ ತುಂಬಿಸಿ ಅದನ್ನು ಬಟ್ಟೆ ಮತ್ತು ಅಕ್ಕಿ ತಂದಿದ್ದ ಪ್ಲಾಸ್ಟಿಕ್‍ನಿಂದ ಕವರ್‍‍ನಿಂದ ಸುತ್ತಿ ಜಸೋವಾ ವಿಹಾರ್‍‍ನಲ್ಲಿರುವ ನಿರ್ಜನ ಪ್ರದೇಶವೊಂದರಲ್ಲಿ ಎಸೆಯಲಾಗಿತ್ತು. ಮಂಗಳವಾರ ಅನಾಥ ಸ್ಥಿತಿಯಲ್ಲಿ ಶವ ಪತ್ತೆಯಾದಾಗ ಪೊಲೀಸರು ತನಿಖೆ ಆರಂಭಿಸಿದ್ದರು.

ದೆಹಲಿ ಆಗ್ನೇಯ ವಲಯದ ಡಿಎಸ್‍ಪಿ ಚಿನ್ಮಯಿ ಬಿಸ್ವಾಲ್ ಅವರ ತಂಡ ತನಿಖೆ ನಡೆಸಿದಾಗ ಮೃತದೇಹದೊಂದಿಗೆ ಬಟ್ಟೆ ಪತ್ತೆಯಾಗಿತ್ತು, ಬಟ್ಟೆಯ ಜಾಡು ಹಿಡಿದು ಹೊರಟರೂ ಪೊಲೀಸರಿಗೆ ಮೃತದೇಹವನ್ನು ಗುರುತಿಸಲು ಸಾಧ್ಯವಾಗಿಲ್ಲ. ಅನಂತರ ಮೃತದೇಹವನ್ನು ತುಂಬಿಸಿದ್ದ ರಟ್ಟಿನ ಪೆಟ್ಟಿಗೆಯನ್ನು ಪರಿಶೀಲಿಸಿದಾಗ ಅದರಲ್ಲಿ ಪಾರ್ಸೆಲ್ ಕಂಪನಿಯೊಂದರ ವಿಳಾಸ ಪತ್ತೆಯಾಗಿತ್ತು. ಅಷ್ಟೇ ಅಲ್ಲದೆ ಪೆಟ್ಟಿಗೆಯಲ್ಲಿರುವ ಪಾರ್ಸೆಲ್ ಸ್ವೀಕರಿಸಿದ ಪ್ರದೇಶದ ಕೋಡ್ ನಮೂದಿಸಲಾಗಿತ್ತು. ಈ ವಿಳಾಸವನ್ನು ಪತ್ತೆ ಹಚ್ಚಿದಾಗ ಶಾರ್ಜಾದಿಂದ ಕಂಪನಿಯೊಂದು ಉತ್ತರ ಪ್ರದೇಶದ ಅಲಿಘಡದಲ್ಲಿರುವ ಜಾವೇದ್ ಅಖ್ತರ್ ಎಂಬವರಿಗೆ ಕಳಿಸಿದ ಪಾರ್ಸೆಲ್ ಅದಾಗಿತ್ತು. ಪೊಲೀಸರು ಅಖ್ತರ್‍‍ನ್ನು ವಿಚಾರಣೆಗೊಳಪಡಿಸಿದಾಗ ಆಗ್ನೇಯ ದೆಹಲಿಯ ಶಹೀನ್ ಭಾಗ್‍ನಲ್ಲಿರುವ ವ್ಯಕ್ತಿಯೊಬ್ಬರು ಆ ಪೆಟ್ಟಿಗೆಯನ್ನು ಕೊಂಡು ಹೋಗಿದ್ದರು ಎಂಬ ಮಾಹಿತಿ ಸಿಕ್ಕಿತು. ಈ ಮಾಹಿತಿಯ ಮೇರೆಗೆ ಶೋಧ ನಡೆಸಿದಾಗ ಸಾಜಿದ್ ಅಲಿ ಸಿಕ್ಕಿಬಿದ್ದಿದ್ದಾರೆ ಎದು ಬಿಸ್ವಾಲ್ ಹೇಳಿದ್ದಾರೆ.
 

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !