ಕುಟುಂಬದ ಸದಸ್ಯರೇ ನನಗೆ ಮತ ಹಾಕಿಲ್ಲ ಎಂದು ಕಣ್ಣೀರಿಟ್ಟ ಪಕ್ಷೇತರ ಅಭ್ಯರ್ಥಿ

ಬುಧವಾರ, ಜೂನ್ 19, 2019
26 °C

ಕುಟುಂಬದ ಸದಸ್ಯರೇ ನನಗೆ ಮತ ಹಾಕಿಲ್ಲ ಎಂದು ಕಣ್ಣೀರಿಟ್ಟ ಪಕ್ಷೇತರ ಅಭ್ಯರ್ಥಿ

Published:
Updated:

ಜಲಂಧರ್: ಬಿಜೆಪಿ ಮತ್ತು ನರೇಂದ್ರ ಮೋದಿ ಭರ್ಜರಿ ಗೆಲುವು ಸಾಧಿಸಿ ಖುಷಿಯ ನಗು ಬೀರಿದಾಗ, ಚುನಾವಣೆಯಲ್ಲಿ ಪರಾಭವಗೊಂಡ ದುಃಖದಲ್ಲಿ ಮಾಧ್ಯಮಗಳ ಮುಂದೆ ಕಣ್ಣೀರಿಡುತ್ತಿರುವ ಪಕ್ಷೇತರ ಅಭ್ಯರ್ಥಿಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಪಂಜಾಬ್‌ನ ಜಲಂಧರ್‌ನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನೀಟು ಶಟ್ಟರನ್‌ವಾಲಾ  ಮಾಧ್ಯಮಗಳ ಮುಂದೆ ಅಳುತ್ತಿರುವ ವಿಡಿಯೊ ಇದಾಗಿದೆ.

 

 

 

ಚುನಾವಣೆಯಲ್ಲಿ ಬಹುಮತದಿಂದ ಗೆಲ್ಲುತ್ತೇನೆ ಎಂಬ  ಭರವಸೆಯಿಂದ ನೀಟು ಈ ಚುನಾವಣೆ ಸ್ಪರ್ಧಿಸಿರಲಿಲ್ಲ, ಆದರೆ ಚುನಾವಣಾ ಫಲಿತಾಂಶ ಪ್ರಕಟವಾದಾಗ ನೀಟು ಅವರಿಗೆ ಲಭಿಸಿದ ಮತಗಳ ಸಂಖ್ಯೆ 5!  ಬರೀ 5 ಮತಗಳು ಸಿಕ್ಕಿದ್ದಕ್ಕೆ ಇವರು ಈ ರೀತಿ ಕಣ್ಣೀರು  ಹಾಕಿದ್ದಾರಾ?  ಅದೂ ಅಲ್ಲ.  ನೀಟು ಕುಟುಂಬದಲ್ಲಿ 9 ಸದಸ್ಯರಿದ್ದಾರೆ. ಹೀಗಿದ್ದರೂ 5 ಮತ ಮಾತ್ರ ಸಿಕ್ಕಿದೆ. ಇನ್ನು ನಾಲ್ಕು ಸದಸ್ಯರು ತನಗೆ ಮತ ಹಾಕಿಲ್ಲ ಎಂಬ ನೋವಿನಿಂದ ಅವರು ಕಣ್ಣೀರು ಹಾಕಿದ್ದಾರೆ. ಇನ್ನು ಮುಂದೆ ತಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದಿದ್ದಾರೆ ನೀಟು.

ನೀಟು ಮಾಧ್ಯಮಗಳ ಮುಂದೆ ಅಳುತ್ತಿರುವ ವಿಡಿಯೊ ವೈರಲ್ ಆಗುವುದರ ಜತೆಗೇ ಕುಟುಂಬದ ಸದಸ್ಯರೇ ಅಭ್ಯರ್ಥಿಗೆ ಮತ ಹಾಕಿಲ್ಲ ಎಂದು ಹಾಸ್ಯ ಮಾಡುವ ಹಲವಾರು ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ.

ನಿಜವಾಗಿಯೂ ಫಲಿತಾಂಶ ಪ್ರಕಟವಾದಾಗ ನೀಟು ಶಟ್ಟರನ್‌ವಾಲಾ ಅವರಿಗೆ ಸಿಕ್ಕಿದ ಮತ 856. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ನೀಟು ಅವರಿಗೆ ಸಿಕ್ಕಿದ ಮತಗಳು 856 ಎಂದು ಇದೆ. ಆದರೆ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದಾಗ ತಮಗೆ ಕೇವಲ 5 ಮತಗಳು ಸಿಕ್ಕಿದೆ ಎಂದು ಬೇಸರದಿಂದ ನೀಟು ಕಣ್ಣೀರಿಟ್ಟಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 7

  Happy
 • 8

  Amused
 • 4

  Sad
 • 1

  Frustrated
 • 0

  Angry

Comments:

0 comments

Write the first review for this !