ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ಇತ್ತು ‘ನರಭಕ್ಷಕ’ ಅವನಿ ಹೊಟ್ಟೆ: ಮರಣೋತ್ತರ ಪರೀಕ್ಷೆಯಿಂದ ಬಯಲು

Last Updated 8 ನವೆಂಬರ್ 2018, 11:27 IST
ಅಕ್ಷರ ಗಾತ್ರ

ಮುಂಬೈ:‘ನರಭಕ್ಷಕ’ ಎನ್ನುವ ಹಣೆಪಟ್ಟಿ ಕಟ್ಟಿದ್ದಹೆಣ್ಣು ಹುಲಿ ಅವನಿ ಹತ್ಯೆಗೀಡಾದಾಗ ಅದರ ಹೊಟ್ಟೆ ಖಾಲಿಯಿತ್ತು. ಕೆಲ ದಿನಗಳಿಂದ ಅದು ಏನೂ ತಿಂದಿರಲಿಲ್ಲಎಂಬುದು ಮರಣೋತ್ತರ ಪರೀಕ್ಷೆಯಿಂದ ಬಯಲಾಗಿದೆ.

ಅವನಿಗೆ ಶೂಟ್‌ ಮಾಡಿ ಒಂದು ವಾರ ಕಳೆಯುತ್ತಿದ್ದು ಅದರ ಮರಿಗಳು ಹಸಿವಿನಿಂದ ಬಳಲುತ್ತಿರಬಹುದುಎಂದುವನ್ಯಜೀವಿ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.ಮಹಾರಾಷ್ಟ್ರದ ಯವತ್‌ಮಲ್‌ ಜಿಲ್ಲೆಯ ಬೊರಟಿ ಅರಣ್ಯ ಪ್ರದೇಶದಲ್ಲಿ ಸ್ವತಂತ್ರವಾಗಿ ಓಡಾಡುತ್ತಿದ್ದ ಅವನಿ ನರಭಕ್ಷಕ ಎನ್ನುವ ಕಾರಣ ಅಲ್ಲಿನ ಅರಣ್ಯ ಇಲಾಖೆಯೇ ಶಾರ್ಪ್‌ಶೂಟರ್‌ ಮೂಲಕ ಗುಂಡಿಕ್ಕಿ ಕೊಲ್ಲಿಸಿತ್ತು.

‘ಮಿಡ್‌–ಡೇ’ಗೆ ದೊರಕಿರುವ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ‘ಹೊಟ್ಟೆಯು ದ್ರವ ಪದಾರ್ಥದಿಂದ ತುಂಬಿತ್ತು ಮತ್ತು ಯಾವುದೇ ಘನ ಪದಾರ್ಥಗಳು ಇರಲಿಲ್ಲ’ ಎಂದು ಹೇಳಲಾಗಿದೆ.

‘ಮರಿಗಳಿಗೆ ಕೇವಲ 10 ತಿಂಗಳ ಆಗಿರುವುದರಿಂದ ಅವು ಸ್ವತಂತ್ರವಾಗಿ ಜೀವಿಸಲು ಸಾಧ್ಯವಿಲ್ಲ. ಈ ಪ್ರಾಯದಲ್ಲಿ ತಾಯಿಯಿಂದ ಬೇಟೆಯಾಡುವುದನ್ನು ಹುಲಿಮರಿಗಳು ಪೂರ್ತಿ ಕಲಿತಿರುವುದಿಲ್ಲ. ಶುಕ್ರವಾರಕ್ಕೆ ಅವನಿ ಮೃತಪಟ್ಟು ಒಂದು ವಾರವಾಗುತ್ತದೆ. ಆಹಾರವಿಲ್ಲದೆಹುಲಿಮರಿಗಳು ಉಪವಾಸದಿಂದ ಬಳಲುತ್ತಿರಬಹುದು’ ಎಂದು ಆತಂಕ ಈಗ ವನ್ಯಜೀವಿ ಪ್ರಿಯರಲ್ಲಿ ಮೂಡಿದೆ.

ಹುಲಿಮರಿಗಳನ್ನು ಹುಡುಕಲು ಅರಣ್ಯ ಇಲಾಖೆಯ ಸುಮಾರು 100 ಸಿಬ್ಬಂದಿ ಸೇರಿಕೂಂಬಿಂಗ್‌ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ,ಇಲ್ಲಿಯವರೆಗೂ ಮರಿಗಳು ಪತ್ತೆಯಾಗಿಲ್ಲ. ಹುಲಿ ಮರಿಗಳನ್ನು ಆಕರ್ಷಿಸಲು ಅನೇಕ ಸ್ಥಳಗಳಲ್ಲಿ ಮಾಂಸವನ್ನು ಇರಿಸಲಾಗಿದೆ. ಅವನಿಯನ್ನು ಶೂಟ್‌ ಮಾಡಿದ ಸ್ಥಳದ ಬಳಿ ಗಂಡು ಹುಲಿಮರಿ ಕಾಣಸಿಕೊಂಡಿತ್ತು ಎಂಬ ಮಾಹಿತಿ ಬಂದಿದ್ದು, ಆ ಬಗ್ಗೆ ಯಾವುದೇ ಫೋಟೊಗ್ರಾಫ್‌ಗಳು ದೊರೆತಿಲ್ಲ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಅವನಿಯನ್ನು ಪತ್ತೆ ಹಚ್ಚಲು ಈ ಹಿಂದೆ ನಡೆಸಿದ್ದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನವನ್ಯಜೀವಿ ತಜ್ಞ ಡಾ. ಎಚ್‌.ಎಸ್‌. ಪ್ರಯಾಗ್‌, ‘ಅವನಿಗೆ ಶೂಟ್‌ ಮಾಡಿದಾಗ ಅದರ ಹೊಟ್ಟೆ ಬಹುತೇಕ ಖಾಲಿಯಿತ್ತು ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಹೇಳುತ್ತಿದೆ. ಬಹುಶಃಅದು ಹಸಿವಿನಿಂದ ಇದ್ದರೆ, ಖಂಡಿತ ಅದರ ಮರಿಗಳು ಹಸಿವಿನಲ್ಲಿರುತ್ತವೆ. ಈ ಶುಕ್ರವಾರಕ್ಕೆ ಅವನಿಯನ್ನು ಕೊಂದು ಒಂದು ವಾರವಾಗುತ್ತದೆ. ಎಲ್ಲಿ ಆ ಮರಿಗಳು ಹಸಿವಿನಿಂದಲೇ ಸಾಯುತ್ತವೆ ಎಂದುನನಗೆ ಭಯವಾಗುತ್ತಿದೆ. ಅರಣ್ಯ ಇಲಾಖೆ ಶೀಘ್ರ ಅವುಗಳನ್ನು ಪತ್ತೆ ಹಚ್ಚಬೇಕು ಮತ್ತು ಸಾಧ್ಯವಾದಷ್ಟು ಕಡೆಗಳಲ್ಲಿ ಭೇಟೆಯನ್ನು ಇಡಬೇಕು’ ಎಂದು ಸಲಹೆ ನೀಡಿದರು.

‘ಜೊಲ್ಲು ಪರೀಕ್ಷೆಗೆ ಸಂಬಂಧಿಸಿದಂತೆ ಶಾರ್ಪ್‌ಶೂಟರ್‌ ಶಫತ್‌ ಅಲಿ ಖಾನ್‌ ಮತ್ತು ಅಸ್ಗರ್‌ ಅವರ ಹೇಳುವವಿಚಾರ ಹಾಸ್ಯಾಸ್ಪದ ಮತ್ತು ನಿರಾಧಾರವಾದದ್ದು. ನನ್ನ ಸಂಶೋಧನೆಯ ಪಯಣದಲ್ಲಿಜೊಲ್ಲು ಪರೀಕ್ಷೆ ಎಂಬುದನ್ನು ಕೇಳಿಯೇ ಇಲ್ಲ. ಅವರೇ ಹೇಳಿಕೊಂಡಂತೆ 20 ಮೀಟರ್ ಅಂತರದಿಂದ ಅವನಿಗೆ ಶೂಟ್‌ ಮಾಡಲಾಗಿದೆ. ಹೀಗಿದ್ದೂ ಆ ಈಟಿ ಏಕೆ ಬೌನ್ಸ್‌ ಆಗಲಿಲ್ಲ ಎಂಬ ವಿಚಾರ ಆಶ್ಚರ್ಯ ಉಂಟು ಮಾಡಿದೆ. ನನಗೆ ಅನ್ನಿಸುತ್ತದೆ ಹುಲಿಯನ್ನು ಸಾಯಿಸಿದ ನಂತರ ಈಟಿಯನ್ನು ಇಡಲಾಗಿದೆ’ ಎಂದು ಪ್ರಯಾಗ್‌ ಶಂಕೆ ವ್ಯಕ್ತಪಡಿಸಿದರು.

‘ಮತ್ತೊಂದು ಅಂಶವೆಂದರೆ, ಈಟಿ ಚರ್ಮದ ಒಳಗೆ ಹೊಕ್ಕರೆ ಆ ಭಾಗ ಊದಿಕೊಳ್ಳುತ್ತದೆ. ಆದರೆ, ಅವನಿ ಶೂಟ್‌ ಮಾಡಿದ ನಂತರ ತೆಗೆದ ಫೋಟೊವನ್ನು ನೋಡಿದಾಗ ಆ ರೀತಿಯ ಯಾವ ಲಕ್ಷಣವೂ ಕಾಣಲಿಲ್ಲ. ಮರಣೋತ್ತರ ಪರೀಕ್ಷೆಯ ವರದಿಯನ್ನು ನೋಡಿದ ನಂತರ ನನಗೆ ಅನ್ನಿಸುತ್ತಿರುವುದು ರಸ್ತಸ್ರಾವ ಮತ್ತು ಹೃದಾಯಾಘಾತದಿಂದ ಮೃತಪಟ್ಟಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT