ಪಿಣರಾಯಿ ಭೇಟಿಗೆ ಚಾಕು ತಂದಿದ್ದ ಮಾನಸಿಕ ಅಸ್ವಸ್ಥ!

7

ಪಿಣರಾಯಿ ಭೇಟಿಗೆ ಚಾಕು ತಂದಿದ್ದ ಮಾನಸಿಕ ಅಸ್ವಸ್ಥ!

Published:
Updated:

ನವದೆಹಲಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಂಗಿದ್ದ ಇಲ್ಲಿನ ಕೇರಳ ಭವನದೊಳಗೆ ಶನಿವಾರ ಬೆಳಿಗ್ಗೆ ಮಾನಸಿಕ ಅಸ್ವಸ್ಥನೊಬ್ಬ ಚಾಕು ಹಿಡಿದು ಬಂದಿದ್ದ. 

ಮುಖ್ಯಮಂತ್ರಿ ಭೇಟಿಗೆ ಒಳ ನುಗ್ಗಲು ಯತ್ನಿಸಿದ ಕೇರಳದ ವಿಮಲ್‌ ರಾಜ್‌ (46) ಎಂಬ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ತಡೆದು ತಪಾಸಣೆ ನಡೆಸಿದಾಗ ಆತನ ಚೀಲದಲ್ಲಿ ತರಕಾರಿ ಕತ್ತರಿಸುವ ಚಾಕು, ವೈದ್ಯಕೀಯ ವರದಿ ಪತ್ತೆಯಾಗಿವೆ. ಆತ ತನ್ನೊಂದಿಗೆ ರಾಷ್ಟ್ರದ್ವಜವನ್ನೂ ತಂದಿದ್ದ.

ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದ ತಕ್ಷಣ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ.

ಖಿನ್ನತೆ ಮತ್ತು ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಆತನನ್ನು ಪೊಲೀಸರು ದೆಹಲಿಯ ಮನೋರೋಗ ವೈದ್ಯಕೀಯ ಆಸ್ಪತ್ರೆಗೆ ಕಳುಹಿಸಿದ್ದಾರೆ.

'ನನಗೆ ಎರಡು ಮಕ್ಕಳಿದ್ದು, ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದೆ. ದಿನಕ್ಕೆ ₹500–₹600ಕ್ಕಿಂತ ಹೆಚ್ಚು ಸಂಪಾದಿಸಲು ಆಗುತ್ತಿರಲಿಲ್ಲ. ಇದರಿಂದ ಬದುಕಿನಲ್ಲಿ ಜುಗುಪ್ಸೆಗೊಂಡಿದ್ದೆ. ನನಗೆ ಬದುಕಲು ಇಷ್ಟವಿರಲಿಲ್ಲ. ಎಲ್ಲವನ್ನೂ ಪತ್ರದಲ್ಲಿ ಬರೆದಿದ್ದೇನೆ. ನಾನು ಮುಖ್ಯಮಂತ್ರಿಯಿಂದ ಏನನ್ನೂ ಬಯಸುವುದಿಲ್ಲ’ ಎಂದು ವಿಮಲ್‌ ರಾಜ್‌ ತಿಳಿಸಿದ್ದಾನೆ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !