ಪ್ರೇಯಸಿಗಾಗಿ ಎಂಬಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಗೆ ಯತ್ನಿಸಿದ ಯುವಕನ ಬಂಧನ

ಮಂಗಳವಾರ, ಜೂನ್ 25, 2019
22 °C

ಪ್ರೇಯಸಿಗಾಗಿ ಎಂಬಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಗೆ ಯತ್ನಿಸಿದ ಯುವಕನ ಬಂಧನ

Published:
Updated:

ಅಲಿಘಡ: ಪ್ರೇಯಸಿಗಾಗಿ ಎಂಬಿಎ ಪರೀಕ್ಷೆ ಪತ್ರಿಕೆ ಸೋರಿಕೆ ನಡೆಸಲು ಯತ್ನಿಸಿದ ಫಿರೋಜ್ ಆಲಂ ಅಲಿಯಾಸ್ ರಾಜ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.

ಅಲಿಘಡದಲ್ಲಿ ರಾಜಕಾರಣಿಯಾಗಿರುವ ಫಿರೋಜ್‌ನ ಎಸ್‌ಯುವಿಯಲ್ಲಿ ಬಿಎಸ್‌ಪಿ ಕೋಆರ್ಡಿನೇಟರ್ ಪಟಿಯಾಲಿ ಎಂಬ ನೇಮ್ ಪ್ಲೇಟ್ ಕೂಡಾ ಇದೆ. ಈತನ ಪ್ರೇಯಸಿ ಎಂಬಿಎ ಪರೀಕ್ಷೆ ಬರೆಯುತ್ತಿದ್ದು, ಆಕೆಗಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಯತ್ನಿಸಿದ್ದರು.

ಅದಕ್ಕಾಗಿ ಎಎಂಯು ನೌಕರ ಇರ್ಷಾದ್ ಎಂಬವರ ಸಹಾಯವನ್ನು ಪಡೆದಿದ್ದರು. ವಿಶ್ವವಿದ್ಯಾನಿಲಯದಲ್ಲಿ  ಖಾಯಂ ಕೆಲಸ ಕೊಡಿಸಿವುದಾಗಿ ಫಿರೋಜ್ ಇರ್ಷಾದ್‌ಗೆ ಭರವಸೆ ನೀಡಿದ್ದರು ಎನ್ನಲಾಗಿದೆ.

ಫಿರೋಜ್ ತನ್ನ ಪ್ರೇಯಸಿಗೆ ಮೊದಲು ನಕಲಿ ಪ್ರಶ್ನೆ ಪತ್ರಿಕೆಯೊಂದನ್ನು ನೀಡಿದ್ದರು. ಆದರೆ ಅದು ನಕಲಿ ಎಂದು ಗೊತ್ತಾದಾಗ ಆಕೆ ಈತನೊಂದಿಗೆ ಮುನಿಸಿಕೊಂಡು ಮಾತು ಬಿಟ್ಟಿದ್ದಳು.

ಇದಾದ ನಂತರ ಹೈದರ್ ಎಂಬ ಗೆಳೆಯನನ್ನು ಭೇಟಿ ಮಾಡಿದ ಫಿರೋಜ್, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಸಂಚು ರೂಪಿಸಿದ್ದನು. ಇವರಿಬ್ಬರೂ ಸೇರಿ ಇರ್ಷಾದ್‌ನ್ನು ಒಪ್ಪಿಸಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಯತ್ನಿಸಿದ್ದರು.

ಇದೀಗ ಹೈದರ್ ಮತ್ತು ಇರ್ಷಾದ್, ಫಿರೋಜ್ ಜತೆ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಫಿರೋಜ್‌ನ ಪ್ರೇಯಸಿ ತಲೆ ಮರೆಸಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !