ಎಕ್ಸ್‌ಪ್ರೆಸ್‌ ಹೆದ್ದಾರಿ : ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಬಂಧನ

7

ಎಕ್ಸ್‌ಪ್ರೆಸ್‌ ಹೆದ್ದಾರಿ : ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಬಂಧನ

Published:
Updated:

ಚೆನ್ನೈ: ತಮಿಳುನಾಡಿನಲ್ಲಿ ಉದ್ದೇಶಿತ ಚೆನ್ನೈ–ಸೇಲಂ ನಡುವಿನ ಅಷ್ಟಪಥ ಎಕ್ಸ್‌ಪ್ರೆಸ್‌ ಹೆದ್ದಾರಿ ನಿರ್ಮಾಣ ಯೋಜನೆಗೆ ರೈತರಿಂದ ವಿರೋಧ ವ್ಯಕ್ತವಾಗಿದ್ದು ಅವರು ಆಯೋಜಿಸಿದ್ದ ಸಭೆಯಲ್ಲಿ ರೈತರೊಂದಿಗೆ ಚರ್ಚಿಸಲು ತೆರಳುತ್ತಿದ್ದ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್‌ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ತಿರವಣಮಲೈ ಜಿಲ್ಲೆಯ ಚೆಂಗಂ ಸಮೀಪ ತಮಿಳುನಾಡು ಪೊಲಿಸರು ಯೋಗೇಂದ್ರ ಯಾದವ್‌ ಅವರನ್ನು ಬಂಧಿಸಿದ್ದಾರೆ.

ಸುಮಾರು 10 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಚೆನ್ನೈ–ಸೇಲಂ ನಡುವೆ ಎಕ್ಸ್‌ಪ್ರೆಸ್‌ ಹೆದ್ದಾರಿ ನಿರ್ಮಾಣವಾಗುತ್ತಿದೆ. ಇದರಿಂದ ರೈತರು ಸಾಕಷ್ಟು ಭೂಮಿ ಕಳೆದುಕೊಳ್ಳುತ್ತಿದ್ದು ಸಾವಿರಾರು ಮರಗಳು ಹನನವಾಗುವುದರಿಂದ ಈ ಯೋಜನೆಗೆ ಸ್ಥಳೀಯ ಮಟ್ಟದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. 

ಚೆಂಗಂ ಸಮೀಪ ರೈತರು ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಲು ಯೋಗೇಂದ್ರ ಯಾದವ್‌ ತೆರಳುತ್ತಿದ್ದರು. ಪೊಲೀಸರು ಮಾರ್ಗ ಮಧ್ಯದಲ್ಲಿ ನನ್ನನ್ನು ತಡೆದು ಬಂಧಿಸಿದ್ದಾರೆ ಎಂದು ಯೋಗೇಂದ್ರ ಯಾದವ್ ಟ್ವೀಟ್ ಮಾಡಿದ್ದಾರೆ. 

’ನಾನು ತೆರಳುತ್ತಿದ್ದ ವಾಹನವನ್ನು ಬಲವಂತವಾಗಿ ತಡೆದ ಪೊಲೀಸರು, ನನ್ನನ್ನು ಇಳಿಸಿ ಎಳೆದಾಡಿದರು, ನಂತರ ನನ್ನ ಬಳಿಯಿದ ಮೊಬೈಲ್‌ ಫೋನ್‌ ಕಸಿದುಕೊಂಡರು ಎಂದು ಯೋಗೇಂದ್ರ ಯಾದವ್‌ ಟ್ವೀಟ್‌ ಮಾಡಿದ್ದಾರೆ. 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !