ಗುರುವಾರ , ಫೆಬ್ರವರಿ 25, 2021
30 °C

ಕರ್ತಾರಪುರಕ್ಕೆ ಮನಮೋಹನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪಾಕಿಸ್ತಾನದಲ್ಲಿರುವ ಕರ್ತಾರಪುರ ಸಾಹಿಬ್ ಗುರುದ್ವಾರಕ್ಕೆ ನೂತನ ಕಾರಿಡಾರ್‌ ಮೂಲಕ ಭೇಟಿ ನೀಡಲಿರುವ ಮೊದಲ ಬ್ಯಾಚ್‌ನ ಯಾತ್ರಾರ್ಥಿಗಳಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಹ ಇರಲಿದ್ದಾರೆ.

ಪಾಕಿಸ್ತಾನದ ಪಂಜಾಬ್‌ ಪ್ರಾಂತದಲ್ಲಿರುವ ಈ ಗುರುದ್ವಾರವು ಭಾರತದ ಗಡಿಯಿಂದ ಕೇವಲ 3 ಕಿ.ಮೀ. ದೂರದಲ್ಲಿದೆ. ಈವರೆಗೆ ಇಸ್ಲಮಾಬಾದ್‌ಗೆ ಹೋಗಿ, ಅಲ್ಲಿಂದ ಈ ಗುರುದ್ವಾರಕ್ಕೆ ಭೇಟಿ ನೀಡಬೇಕಿತ್ತು. ಇಲ್ಲವೇ ಗಡಿಯಲ್ಲಿ ನಿಂತು ದೂರದರ್ಶಕದ ಮೂಲಕ ಗುರುದ್ವಾರವನ್ನು ನೋಡಬೇಕಿತ್ತು. ಸಿಖ್ಖರ ಪವಿತ್ರ ಕ್ಷೇತ್ರವಾದ ಈ ಗುರುದ್ವಾರಕ್ಕೆ ಭೇಟಿ ನೀಡಲು ಅನುಕೂಲವಾಗುವಂತೆ ಪಾಕಿಸ್ತಾನವು ಗಡಿಯಿಂದ 3 ಕಿ.ಮೀ. ಉದ್ದದ ಕಾರಿಡಾರ್ ನಿರ್ಮಿಸಿದೆ. ಇದೇ 9ರಂದು ಮೊದಲ ತಂಡ ಭೇಟಿ ನೀಡಲಿದೆ. ಅದರಲ್ಲಿ ಮನಮೋಹನ್ ಸಿಂಗ್ ಸಹ ಇರಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು