ಕೇರಳ ಕಾಂಗ್ರೆಸ್‌(ಎಂ) ಸಂಸ್ಥಾಪಕ ಕೆ.ಎಂ.ಮಾಣಿ ನಿಧನ

ಮಂಗಳವಾರ, ಏಪ್ರಿಲ್ 23, 2019
31 °C

ಕೇರಳ ಕಾಂಗ್ರೆಸ್‌(ಎಂ) ಸಂಸ್ಥಾಪಕ ಕೆ.ಎಂ.ಮಾಣಿ ನಿಧನ

Published:
Updated:
Prajavani

ಕೊಟ್ಟಾಯಂ: ಕೇರಳ ಕಾಂಗ್ರೆಸ್‌ (ಎಂ) ಸಂಸ್ಥಾಪಕ ಕೆ.ಎಂ.ಮಾಣಿ (86) ಮಂಗಳವಾರ ನಿಧನರಾಗಿದ್ದಾರೆ. 

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು  ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರಿಗೆ ಪತ್ನಿ ಮತ್ತು ಒಬ್ಬ ಪುತ್ರ, ಐವರು ಪುತ್ರಿಯರು ಇದ್ದಾರೆ.

ಐದು ದಶಕಗಳ ಕಾಲ ಪಾಲ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ದಾಖಲೆ ಇವರದ್ದು. 1965ರಿಂದ ಸತತವಾಗಿ ಈ ಕ್ಷೇತ್ರದಿಂದ ಇವರು ಜಯ ಗಳಿಸಿದ್ದಾರೆ. 24 ವರ್ಷಗಳ ಕಾಲ ಸಂಪುಟ ದರ್ಜೆ ಸಚಿವರಾಗಿದ್ದರು. ಕೇರಳದ ಹಣಕಾಸು ಸಚಿವರಾಗಿ 13 ಬಾರಿ ಬಜೆಟ್‌ ಮಂಡಿಸಿರುವ ಹಿರಿಮೆ ಇವರದು. 

ಕೆಪಿಸಿಸಿ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದ ಇವರು ಬಳಿಕ ಕೊಟ್ಟಾಯಂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದರು. ಬಳಿಕ ‘ಕೇರಳ ಕಾಂಗ್ರೆಸ್’ ಎಂಬ ಪ್ರತ್ಯೇಕ ಪಕ್ಷ ಕಟ್ಟಿದ ಅವರು 1979ರಲ್ಲಿ ಕೇರಳ ಕಾಂಗ್ರೆಸ್ (ಎಂ) ಸ್ಥಾಪಿಸಿ ಅದರ ಅಧ್ಯಕ್ಷರಾದರು. ಥಾಮಸ್‌ ಮಾಣಿ ಮತ್ತು ಅಲಿಯಮ್ಮ ಮಾಣಿ ದಂಪತಿಯ ಪುತ್ರನಾಗಿ 1933ರ ಜನವರಿ 30ರಂದು ಜನಿಸಿದ್ದ ಮಾಣಿ ಅವರು ಕಾನೂನು ಪದವಿ ಗಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !