ಆಸ್ಪತ್ರೆಯಲ್ಲಿಯೇ ಸಚಿವ ಸಂಪುಟ ಸಭೆ ಕರೆದ ಮನೋಹರ್ ಪರ್ರೀಕರ್‌

7

ಆಸ್ಪತ್ರೆಯಲ್ಲಿಯೇ ಸಚಿವ ಸಂಪುಟ ಸಭೆ ಕರೆದ ಮನೋಹರ್ ಪರ್ರೀಕರ್‌

Published:
Updated:

ನವದೆಹಲಿ: ದೆಹಲಿಯ ಏಮ್ಸ್‌ (AIMS) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರೀಕರ್‌ ಶುಕ್ರವಾರ ಆಸ್ಪತ್ರೆಯಲ್ಲಿಯೇ ಸಚಿವ ಸಂಪುಟ ಸಭೆ ಕರೆದಿದ್ದಾರೆ.

ಪ್ಯಾಂಕ್ರಿಯಾಟಿಕ್ ಸಮಸ್ಯೆಯಿಂದ ಬಳಲುತ್ತಿರುವ ಪರ್ರೀಕರ್ ಸೆಪ್ಟೆಂಬರ್ 15ರಂದು ಏಮ್ಸ್ ಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದ ನಂತರ ಇದೇ ಮೊದಲ ಬಾರಿ ಅವರು ಸಚಿವ  ಸಂಪುಟ ಸಭೆ ಕರೆದಿದ್ದಾರೆ.

ಈ ಸಭೆಯಲ್ಲಿ ರಾಜ್ಯ ಸರ್ಕಾರ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂಜಿಪಿ) ಮತ್ತು ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‍ಪಿ) ಪಕ್ಷಗಳ ಜತೆಗಿನ ಮೈತ್ರಿ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಅದೇ ವೇಳೆ ಮೈತ್ರಿ ಪಕ್ಷಗಳಿಗೆ ಯಾವ ಸಚಿವ ಸ್ಥಾನವನ್ನು ನೀಡಿಬೇಕು ಎಂಬುದರ ಬಗ್ಗೆ ಚರ್ಚೆಗಳು ನಡೆಯುವ ಸಾಧ್ಯತೆ ಇದೆ ಎಂದು ಬಲ್ಲಮೂಲಗಳು ಹೇಳಿವೆ.

ದೆಹಲಿಯಲ್ಲಿ ಅಕ್ಟೋಬರ್ 12ರಂದು ನಡೆಯಲಿರುವ ಸಭೆಗೆ ಗೋವಾ ಮುಖ್ಯಮಂತ್ರಿ ನಮ್ಮನ್ನು ಆಹ್ವಾನಿಸಿದ್ದಾರೆ. ಬೇರೆ ಯಾರನ್ನು ಈ ಸಭೆಗೆ ಆಹ್ವಾನಿಸಿದ್ದಾರೆ ಎಂದು ನನಗೆ ಗೊತ್ತಿಲ್ಲ ಎಂದಿದ್ದಾರೆ ಶಾಸಕ ಗೋವಿಂದ್ ಗಾವಡೆ.
ಎಂಜಿಪಿ ನೇತಾರ ಸುಧಿನ್ ಧವಲೀಕರ್, ಜಿಎಫ್‍ಪಿ ನೇತಾರ ವಿಜಯ್ ಸರ್ದೇಸಾಯಿ, ಶಾಸಕ ಗೋವಿಂದ್ ಗಾವಡೆ, ರೋಹನ್ ಖೌಂಟೆ ಮತ್ತು ಪ್ರಸಾದ್ ಗಾಂವ್ಕರ್ ಅವರನ್ನು ಸಭೆಗೆ ಆಹ್ವಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !