ಕೇರಳ‌: ಎನ್‌ಕೌಂಟರ್‌ಗೆ ಶಂಕಿತ ನಕ್ಸಲ್‌ ಬಲಿ

ಭಾನುವಾರ, ಮಾರ್ಚ್ 24, 2019
32 °C

ಕೇರಳ‌: ಎನ್‌ಕೌಂಟರ್‌ಗೆ ಶಂಕಿತ ನಕ್ಸಲ್‌ ಬಲಿ

Published:
Updated:

ವಯನಾಡ್‌, ಕೇರಳ: ಇಲ್ಲಿನ ವೈತಿರಿಯಲ್ಲಿ ಪೊಲೀಸರು ಹಾಗೂ ನಕ್ಸಲರ ನಡುವೆ ಬುಧವಾರ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಶಂಕಿತ ನಕ್ಸಲನೊಬ್ಬ ಮೃತಪಟ್ಟಿದ್ದಾನೆ.

ಮೃತಪಟ್ಟಿರುವ ನಕ್ಸಲ್‌ನನ್ನು ಮಾವೋವಾದಿ ನಾಯಕ ಸಿ.ಪಿ. ಜಲೀಲ್‌ ಎಂದು ಗುರುತಿಸಲಾಗಿದೆ.

4 ಮಂದಿ ಶಂಕಿತ ನಕ್ಸಲರು ಬುಧವಾರ ರಾತ್ರಿ ಇಲ್ಲಿನ ಉಪವನ ರೆಸಾರ್ಟ್‌ಗೆ ತೆರಳಿ ಆಹಾರ ಹಾಗೂ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದರು. ಕೂಡಲೇ ರೆಸಾರ್ಟ್‌ ನೌಕರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ... ನಕ್ಸಲ್‌ ತಂಡ ಪ್ರತ್ಯಕ್ಷ: ಕೊಡಗು ಗಡಿಭಾಗದಲ್ಲಿ ಎಎನ್‌ಎಫ್‌ ಶೋಧ

ಕೇರಳ ಪೊಲೀಸ್‌ನ ಥಂಡರ್‌ಬೋಲ್ಡ್‌ ಪಡೆಯ ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ ನಕ್ಸಲರು ಅವರತ್ತ ಗುಂಡು ಹಾರಿಸಿದ್ದಾರೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲನೊಬ್ಬ ಹತನಾಗಿದ್ದಾನೆ. ಇಬ್ಬರು ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದೂ ತಿಳಿಸಿದ್ದಾರೆ.

ನಕ್ಸಲರ ಪತ್ತೆಗಾಗಿ ಸಮೀಪ ಪ್ರದೇಶಗಳಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !