ಚುನಾವಣೆ: ಮಾವೊವಾದಿಗಳಿಂದ ಮಹಿಳಾ ಅಧಿಕಾರಿ ಹತ್ಯೆ

ಭಾನುವಾರ, ಏಪ್ರಿಲ್ 21, 2019
26 °C

ಚುನಾವಣೆ: ಮಾವೊವಾದಿಗಳಿಂದ ಮಹಿಳಾ ಅಧಿಕಾರಿ ಹತ್ಯೆ

Published:
Updated:

ಫೂಲ್‌ಬನಿ, ಒಡಿಶಾ: ಫೂಲ್‌ಬನಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡನೇ ಹಂತದ ಮತದಾನ ಅಂಗವಾಗಿ ಸಿಬ್ಬಂದಿಯೊಂದಿಗೆ ಬೂತ್‌ವೊಂದಕ್ಕೆ ತೆರಳುತ್ತಿದ್ದ ಅಧಿಕಾರಿಯೊಬ್ಬರನ್ನು ಮಾವೊವಾದಿಗಳು ಬುಧವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಸೆಕ್ಟರ್‌ ಅಧಿಕಾರಿ ಸಂಯುಕ್ತಾ ದಿಗಲ್‌ ಹತ್ಯೆಯಾದವರು. ಅರಣ್ಯದ ಮೂಲಕ ಹಾಯ್ದು ಹೋಗುವ ಸಂದರ್ಭದಲ್ಲಿ ರಸ್ತೆ ಮೇಲೆ ಬಿದ್ದಿದ್ದ ಸಂಶಯಾಸ್ಪದ ವಸ್ತುವೊಂದನ್ನು ಪರಿಶೀಲಿಸಲು ಸಂಯುಕ್ತಾ ಅವರು ವಾಹನದಿಂದ ಇಳಿದಿದ್ದಾರೆ. ಆಗ ಮಾವೊವಾದಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಡಿಜಿಪಿ ಬಿ.ಕೆ.ಶರ್ಮಾ ತಿಳಿಸಿದ್ದಾರೆ.

ವಾಹನದಲ್ಲಿದ್ದ ಇತರೆ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !