ಮರಾಠ ಮೀಸಲಾತಿ ಹೋರಾಟ: ಬಾಲಕಿ ಆತ್ಮಹತ್ಯೆ

7

ಮರಾಠ ಮೀಸಲಾತಿ ಹೋರಾಟ: ಬಾಲಕಿ ಆತ್ಮಹತ್ಯೆ

Published:
Updated:

ಅಹ್ಮದ್‌ನಗರ ಮಹಾರಾಷ್ಟ್ರ (ಪಿಟಿಐ): ಮರಾಠ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ಬಾಲಕಿಯೊಬ್ಬಳು ಪ್ರಾಣತ್ಯಾಗ ಮಾಡಿದ್ದಾಳೆ. 

ಇಲ್ಲಿನ ರಾಧಾಬಾಯಿ ಕಲೆ ಮಹಿಳಾ ಮಹಾವಿದ್ಯಾಲಯದಲ್ಲಿ 11ನೇ ತರಗತಿಯಲ್ಲಿ ಓದುತ್ತಿದ್ದ ಕಿಶೋರಿ ಕಾನಡೆ (16) ಹಾಸ್ಟೆಲ್‌ನ ಕೋಣೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ‘ಮರಾಠ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ಪ್ರಾಣತ್ಯಾಗ ಮಾಡುತ್ತಿದ್ದೇನೆ’ ಎಂದು ಪತ್ರ ಬರೆದಿಟ್ಟು ಬಾಲಕಿ ಸಾವಿಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. 

‘ಮರಾಠ ಸಮುದಾಯದಲ್ಲಿ ಹುಟ್ಟಿದ ಕಾರಣದಿಂದ ನನಗೆ ಅನ್ಯಾಯವಾಗುವಂತಾಗಿದೆ. ಬಡರೈತನ ಕುಟುಂಬದಲ್ಲಿ ಜನಿಸಿರುವ ನಾನು ಹತ್ತನೇ ತರಗತಿಯಲ್ಲಿ ಶೇ 89ರಷ್ಟು ಅಂಕಗಳಿಸಿದರೂ, ಮೀಸಲಾತಿಯಡಿ ಕಾಲೇಜು ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಮೀಸಲಾತಿ ದೊರೆತಿದ್ದರೆ ಶುಲ್ಕದಲ್ಲಿ ವಿನಾಯಿತಿ ದೊರೆಯುತ್ತಿತ್ತು. ಈಗ 11ನೇ ತರಗತಿಗೆ ₹8 ಸಾವಿರ ಶುಲ್ಕ ಕಟ್ಟಿದ್ದು, ಇದರಿಂದ ನನ್ನ ಕುಟುಂಬಕ್ಕೆ ಹೊರೆಯಾಗಿದೆ’ ಎಂದು ಕಿಶೋರಿ ಪತ್ರದಲ್ಲಿ ಬರೆದಿದ್ದಾಳೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !