ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಮಹಿಳೆ–ಮುಸ್ಲಿಂ ಪುರುಷ ದಂಪತಿಗೆ ಜನಿಸಿದ ಮಗುವಿಗೆ ಆಸ್ತಿ ಹಕ್ಕಿದೆ:ಸುಪ್ರೀಂ

Last Updated 23 ಜನವರಿ 2019, 12:23 IST
ಅಕ್ಷರ ಗಾತ್ರ

ನವದೆಹಲಿ: ಹಿಂದೂ ಮಹಿಳೆ ಹಾಗೂ ಮುಸ್ಲಿಂ ಪುರುಷನ ನಡುವಣ ವಿವಾಹವನ್ನು ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಸಿಂಧು ಎಂದು ಒಪ್ಪಲಾಗುವುದಿಲ್ಲ. ಆದರೆ ಅಂತಹ ವಿವಾಹ ಕಾನೂನುಬಾಹಿರ ಎಂದು ಕೂಡ ಹೇಳಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

ಇಂತಹ ಪ್ರಕರಣಗಳಲ್ಲಿ ಹಿಂದೂ – ಮುಸ್ಲಿಂ ದಂಪತಿಗೆ ಜನಿಸಿದಮಕ್ಕಳಿಗೆ ತಂದೆ ಆಸ್ತಿಯಲ್ಲಿ ಹಕ್ಕಿದೆ ಎಂದು ಕೋರ್ಟ್‌ ಹೇಳಿದೆ.

ವಲ್ಲಿಯಮ್ಮ, ಮಹಮ್ಮದ್‌ ಇಲಿಯಾಸ್‌ ದಂಪತಿಯ ಆಸ್ತಿ ಹಂಚಿಕೆಗೆ ಸಂಬಂಧಿಸಿ ಅವರ ಮಗ ಶಂಸುದ್ದೀನ್‌ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅಲ್ಲಿ ಅವರಿಗೆ ಹಿನ್ನಡೆಯಾಗಿತ್ತು. ಬಳಿಕಹೈಕೋರ್ಟ್‌ ತೀರ್ಪು ಪ್ರಶ್ನಿಸಿಸುಪ್ರೀಂ ಕೋರ್ಟ್‌ಗೆ ಮೆಲ್ಮನವಿ ಸಲ್ಲಿಸಿದ್ದರು.

ಪ್ರಕರಣ ಕುರಿತು ಎನ್‌.ವಿ. ರಮಣ್‌ಹಾಗೂ ಎಂ. ಶಾಂತಣ್ಣಗೌಡರ್‌ ನೇತೃತ್ವದ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತು.

‘ವಿಗ್ರಹ ಆರಾಧಕರಾದ ಹಿಂದೂ ಮಹಿಳೆ, ವಿಗ್ರಹ ಆರಾಧಕರಲ್ಲದ ಮುಸ್ಲಿಂ ವ್ಯಕ್ತಿಯನ್ನು ವಿವಾಹ ಆಗುವುದು ಅಸಿಂಧುವಾಗಿತ್ತದೆ. ಅಂತಹ ಪ್ರಕರಣಗಳಲ್ಲಿ ಪತಿಯ ಆಸ್ತಿಯಲ್ಲಿ ಪತ್ನಿ ಪಾಲು ಪಡೆಯಲು ಅವಕಾಶವಿರುವುದಿಲ್ಲ. ಬದಲಾಗಿ ಅವರಿಗೆ ಜನಿಸಿದ ಮಕ್ಕಳಿಗೆ ತಂದೆ ಆಸ್ತಿಯನ್ನು ಆನುವಂಶಿಕವಾಗಿ ಪಡೆಯುವ ಅರ್ಹತೆ ಇರುತ್ತದೆ’ ಎಂದುಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಹೇಳಿರುವುದನ್ನುನ್ಯಾಯಪೀಠ ಉಲ್ಲೇಖಿಸಿದೆ.

ಏನಿದು ಪ್ರಕರಣ?: ತಂದೆಯ ಆಸ್ತಿ ಪಡೆಯಲು ಶಂಸುದ್ದೀನ್‌ 2007ರಲ್ಲಿ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅಲ್ಲಿ ಅವರಿಗೆ ಹಿನ್ನೆಡೆಯಾಗಿತ್ತು.

ತಂದೆ– ತಾಯಿಯ ವಿವಾಹವನ್ನು ಶಂಸುದ್ದೀನ್‌ ಸಮರ್ಥಿಸಿಕೊಂಡಿದ್ದರು. ಆದರೆ ವಿವಾಹದ ವೇಳೆ ವಲ್ಲಿಯಮ್ಮ ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿರಲಿಲ್ಲ. ಆದ ಕಾರಣಕ್ಕೆ ಗಂಡನ ಆಸ್ತಿ ಪಡೆಯಲು ಅವಕಾಶವಿರುವುದಿಲ್ಲ ಎಂದು ಕೋರ್ಟ್‌ ವಿವರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT