ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಪ್ರತಿಭಟನೆ ನಡುವೆ ಹುತಾತ್ಮರಿಗೆ ಗೌರವಾರ್ಪಣೆ

ಪ್ರತ್ಯೇಕತಾವಾದಿಗಳಿಂದ ಪ್ರತಿಭಟನೆ
Last Updated 13 ಜುಲೈ 2019, 19:23 IST
ಅಕ್ಷರ ಗಾತ್ರ

ಶ್ರೀನಗರ: ಪ್ರತ್ಯೇಕತಾವಾದಿಗಳು ನೀಡಿದ್ದ ಬಂದ್ ಕರೆ, ಪ್ರತಿಭಟನೆ, ಆಡಳಿತದಿಂದ ಹಲವಾರು ನಿಬಂಧನೆಗಳ ನಡುವೆ ಶನಿವಾರ ಇಲ್ಲಿ ಹುತಾತ್ಮ ದಿನ ಕಾರ್ಯಕ್ರಮ ನಡೆಯಿತು.

ಪ್ರತ್ಯೇಕವಾದಿಗಳ ಬಂದ್‌ ಕರೆಯನ್ನು ವಿಫಲಗೊಳಿಸುವ ಸಲುವಾಗಿ ನಗರದ ವಿವಿಧ ಭಾಗಗಳಲ್ಲಿ ನಿರ್ಬಂಧ ಹೇರಿದ ಪರಿಣಾಮ ಅಂಗಡಿಗಳು, ಶಾಲಾ–ಕಾಲೇಜುಗಳ ಸಂಪೂರ್ಣ ಮುಚ್ಚಿದ್ದವು.

1931ರಲ್ಲಿ ನಡೆದ ಸೈನಿಕರ ಕಾರ್ಯಾಚರಣೆಯಲ್ಲಿ 22 ಜನ ಕಾಶ್ಮೀರಿ ಗಳು ಹತರಾದದ್ದನ್ನು ಈ ದಿನ ಸ್ಮರಿಸಲಾಗುತ್ತದೆ. ಶ್ರೀನಗರ ಮಾತ್ರವಲ್ಲದೇ, ಕಣಿವೆ ರಾಜ್ಯದ ಇತರ ಪಟ್ಟಣಗಳಲ್ಲಿ ಸಹ ವ್ಯಾಪಾರ–ವಹಿವಾಟು, ಸಾರ್ವ ಜನಿಕ ಸಾರಿಗೆ ಸ್ತಬ್ಧಗೊಂಡಿತ್ತು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಎಲ್ಲೆಡೆ ಬಿಗಿ ಬಂದೋಬಸ್ತ್‌ ಹಾಕಲಾಗಿತ್ತು.

ಪ್ರತ್ಯೇಕತಾವಾದಿಗಳು ರ‍್ಯಾಲಿ ನಡೆಸುವುದನ್ನು ತಡೆಹಿಡಿಯಲಾಯಿತು. ಸರ್ಕಾರದ ಪ್ರತಿನಿಧಿಗಳು ಸ್ಮಾರಕಸ್ಥಳಕ್ಕೆ ತೆರಳಿ, ಹುತಾತ್ಮರಿಗೆ ಗೌರವ ಸಲ್ಲಿಸಿದರು. ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ, ಸಂಸದ ಫಾರೂಕ್‌ ಅಬ್ದುಲ್ಲಾ ಸಹ ಹುತಾತ್ಮರಿಗೆ ಗೌರವ ಸಲ್ಲಿಸಿದರು.

ರಾಜ್ಯಪಾಲರ ಸಲಹೆಗಾರ ಖುರ್ಷೀದ್‌ ಅಹ್ಮದ್‌ ಗುನೈ, ಜಿಲ್ಲಾಧಿಕಾರಿ ಬಸೀರ್‌ ಅಹ್ಮದ್‌ ಖಾನ್‌ ಅವರು ನೌಹತ್ತಾದಲ್ಲಿರುವ ನಕ್ಷಾಬಂದ್‌ ಸಾಹಿಬ್‌ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ, ಗೌರವ ಸಲ್ಲಿಸಿದರು.

ಪ್ರತಿಭಟನೆ: ಜುಲೈ 13ರಂದು ‘ಹುತಾತ್ಮರ ದಿನ’ ಕಾರ್ಯಕ್ರಮ ರದ್ದು ಮಾಡಬೇಕು ಎಂದು ಆಗ್ರಹಿಸಿ ಯುವ ರಜಪೂತ್‌ ಸಭಾ (ವೈಆರ್‌ಎಸ್) ಶನಿವಾರ ಇಲ್ಲಿ ಪ್ರತಿಭಟಿಸಿತು.

‘ಈ ದಿನ ಏನು ನಡೆಯಿತು ಎಂಬ ಬಗ್ಗೆ ಸಮರ್ಪಕ ಮಾಹಿತಿ, ಪ್ರಚಾರ ನೀಡಿಲ್ಲ. ಹೀಗಾಗಿ ಜುಲೈ 13ರಂದು ನೀಡಿರುವ ರಜೆಯನ್ನು ರದ್ದುಪಡಿಸಬೇಕು’ ಎಂದು ಸಂಘಟನೆಯ ಅಧ್ಯಕ್ಷ ಸುರಿಂದರ್‌ ಸಿಂಗ್‌ ಗಿಲ್ಲಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರಿಗೆ ಮನವಿ ಮಾಡಿದರು.

‘ಹುತಾತ್ಮರ ದಿನ’ ಕಾರ್ಯಕ್ರಮ ರದ್ದತಿಗೆ ವೈಆರ್‌ಎಸ್‌ ಆಗ್ರಹಜುಲೈ 13ರಂದು ‘ಹುತಾತ್ಮರ ದಿನ’ ಕಾರ್ಯಕ್ರಮ ರದ್ದು ಮಾಡಬೇಕು ಎಂದು ಆಗ್ರಹಿಸಿ ಯುವ ರಜಪೂತ್‌ ಸಭಾ (ವೈಆರ್‌ಎಸ್) ಶನಿವಾರ ಇಲ್ಲಿ ಪ್ರತಿಭಟಿಸಿತು.

‘ಡೋಗ್ರಾ ಆಳುತ್ತಿದ್ದ ಮಹಾರಾಜ ಹರಿಸಿಂಗ್‌ ಅವರ ಸೈನಿಕರು 1931ರ ಜುಲೈ 13ರಂದು ನಡೆಸಿದ ಗುಂಡಿನ ದಾಳಿಗೆ ಸಾವಿರಾರು ಜನ ಅಲ್ಪಸಂಖ್ಯಾತ ಹಿಂದೂಗಳು ಹತರಾದರು. ಈ ದಿನ ದಬ್ಬಾಳಿಕೆ, ಲೂಟಿ ಹಾಗೂ ಹತ್ಯಾಕಾಂಡವನ್ನು ನೆನಪಿಸುತ್ತದೆ. ಜುಲೈ 13ರಂದು ರಜೆ ಘೋಷಿಸಿದ್ದರೂ, ಜಮ್ಮು ಮತ್ತು ಕಾಶ್ಮೀರದಲ್ಲಿ ಕರಾಳ ದಿನ ಎಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ’ ಎಂದು ಸಂಘಟನೆಯ ಅಧ್ಯಕ್ಷ ಸುರಿಂದರ್‌ ಸಿಂಗ್‌ ಗಿಲ್ಲಿ ಹೇಳಿದರು.

‘ಈ ದಿನ ಏನು ನಡೆಯಿತು ಎಂಬ ಬಗ್ಗೆ ಸಮರ್ಪಕ ಮಾಹಿತಿ, ಪ್ರಚಾರ ನೀಡಿಲ್ಲ. ಹೀಗಾಗಿ ಜುಲೈ 13ರಂದು ನೀಡಿರುವ ರಜೆಯನ್ನು ರದ್ದುಪಡಿಸಬೇಕು’ ಎಂದು ಅವರು ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರಿಗೆ ಮನವಿ ಮಾಡಿದರು.

‘ಜುಲೈ 13ರಂದು ಘೋಷಿಸಿರುವ ಸಾರ್ವತ್ರಿಕ ರಜೆ ರದ್ದುಪಡಿಸಬೇಕು. ಇದರ ಬದಲಾಗಿ ಮಹಾರಾಜ ಹರಿಸಿಂಗ್‌ ಅವರ ಜನ್ಮದಿನವಾದ ಸೆಪ್ಟೆಂಬರ್‌ 23ರಂದು ರಜೆ ಘೋಷಿಸಬೇಕು’ ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದರು.

ಅಮರನಾಥ ಯಾತ್ರೆ ಸ್ಥಗಿತ

ಹುತಾತ್ಮರ ದಿನದ ಅಂಗವಾಗಿ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದ ಕಾಶ್ಮೀರ ಬಂದ್‌ನ ಪರಿಣಾಮ ಮುನ್ನೆಚ್ಚರಿಕೆ ಕ್ರಮವಾಗಿ ಅಮರನಾಥ ಯಾತ್ರೆಯನ್ನು ಶನಿವಾರ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್‌ 30ರಂದು ಯಾತ್ರೆ ಆರಂಭವಾದಂದಿನಿಂದ ಇದುವರೆಗೆ 12 ತಂಡಗಳಲ್ಲಿ ಯಾತ್ರಾರ್ಥಿಗಳು ಪಹಲ್ಗಾಮ್‌ ಮತ್ತು ಬಾಲ್‌ಟಲ್‌ ಬೇಸ್‌ ಕ್ಯಾಂಪ್‌ಗಳಿಗೆ ತೆರಳಿದ್ದಾರೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT