ಉಗ್ರ ಅಜರ್ ಸತ್ತಿಲ್ಲ: ಪಾಕಿಸ್ತಾನ ಮಾಧ್ಯಮ

ಮಂಗಳವಾರ, ಮಾರ್ಚ್ 19, 2019
28 °C

ಉಗ್ರ ಅಜರ್ ಸತ್ತಿಲ್ಲ: ಪಾಕಿಸ್ತಾನ ಮಾಧ್ಯಮ

Published:
Updated:
Prajavani

 ಲಾಹೋರ್‌/ನವದೆಹಲಿ: ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ಜೀವಂತವಾಗಿದ್ದಾನೆ ಎಂದು ಪಾಕಿಸ್ತಾನದ ಜಿಯೊ ‘ಉರ್ದು ನ್ಯೂಸ್‌’ ವಾಹಿನಿ ವರದಿ ಮಾಡಿದೆ.

ಮಸೂದ್‌ ಅಜರ್‌ ಸಾವಿಗೀಡಾಗಿದ್ದಾನೆ ಎನ್ನುವ ವರದಿಗಳು ಸುಳ್ಳು ಎಂದು ಅದು ತಿಳಿಸಿದೆ. ಮಸೂದ್‌ ಅಜರ್‌ನ ಕುಟುಂಬದ ಸದಸ್ಯರ ಮೂಲಗಳನ್ನು ಆಧರಿಸಿ ಉರ್ದು ನ್ಯೂಸ್‌ ಈ ವರದಿ ಮಾಡಿದೆ. ಆದರೆ, ಈ ಬಗ್ಗೆ ಸರ್ಕಾರ ಅಧಿಕೃತವಾದ ಹೇಳಿಕೆ ನೀಡಿಲ್ಲ.

ಈ ನಡುವೆ, ಮಸೂದ್‌ ಅಜರ್‌ ಸಾವಿಗೀಡಾಗಿದ್ದಾನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಗಳನ್ನು  ಖಚಿತ ಪಡಿಸಿಕೊಳ್ಳಲು ಭಾರತದ ಗುಪ್ತಚರ ಇಲಾಖೆ ಅಧಿಕಾರಿಗಳು ಯತ್ನಿಸುತ್ತಿದ್ದಾರೆ.

ಬಾಲಾಕೋಟ್‌ ತರಬೇತಿ ಶಿಬಿರದ ಮೇಲೆ ಭಾರತ ನಡೆಸಿದ ವಾಯುದಾಳಿಯಲ್ಲಿಯೇ ಈತ ಸತ್ತಿದ್ದಾನೆ ಎಂಬ ಬರಹಗಳೂ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿವೆ.  ಆದರೆ, ಇದು ಖಚಿತವಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಯಾವ ಮಾಹಿತಿ ಇಲ್ಲ. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ 50 ವರ್ಷದ ಮಸೂದ್‌ ಅಜರ್‌ ಪಾಕಿಸ್ತಾನದ ರಾವಲ್ಪಿಂಡಿ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂಬ ವಿಷಯ ಮಾತ್ರ ಗೊತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಸೂದ್‌ ಅನಾರೋಗ್ಯ ಪೀಡಿತನಾಗಿದ್ದು, ಮನೆಯಿಂದ ಹೊರಬರಲು ಆತನಿಗೆ ಆಗುತ್ತಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಷಿ ಇತ್ತೀಚೆಗೆ ಹೇಳಿದ್ದರು.

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 1

  Sad
 • 2

  Frustrated
 • 6

  Angry

Comments:

0 comments

Write the first review for this !