ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

61 ಜನರು ಸಾವು: ಛಿದ್ರವಾಗಿದ್ದ ಮೃತ ದೇಹಗಳ ಸಾಮೂಹಿಕ ಅಂತ್ಯಕ್ರಿಯೆ

ರಾವಣ ದಹನದಲ್ಲಿ ರೈಲಿಗೆ ಸಿಲುಕಿ ಸತ್ತವರೆಷ್ಟು?
Last Updated 21 ಅಕ್ಟೋಬರ್ 2018, 17:31 IST
ಅಕ್ಷರ ಗಾತ್ರ

ಅಮೃತಸರ:ಇಲ್ಲಿನ ಜೋದಾ ಪಾಠಕ್ ಬಳಿ ರಾವಣ ದಹನದ ವೇಳೆ ರೈಲಿಗೆ ಸಿಲುಕಿ ಮೃತಪಟ್ಟವರ ಸಂಖ್ಯೆ ಎಷ್ಟು ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

ಘಟನೆಯಲ್ಲಿ 59 ಜನರು ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದರು. 61 ಜನರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಹೇಳಿದೆ.ಘಟನಾ ಸ್ಥಳದಲ್ಲಿ ಸಿಕ್ಕ ಛಿದ್ರಗೊಂಡ ಶವಗಳ ಸಂಖ್ಯೆ 61. ಅವುಗಳ ಜತೆಯಲ್ಲೇ ಛಿದ್ರವಾಗಿದ್ದ ದೇಹದ ಭಾಗಗಳೂ ಸಾಕಷ್ಟು ಸಂಖ್ಯೆಯಲ್ಲಿ ದೊರೆತಿವೆ. ಇವುಗಳಲ್ಲಿ ಗುರುತು ಪತ್ತೆಯಾಗದ 39 ಶವಗಳನ್ನಷ್ಟೇ ಸಾಮೂಹಿಕ ಅಂತ್ಯಕ್ರಿಯೆ ಮಾಡಲಾಗಿದೆ.

ಆದರೆ ‘ರಾವಣ ದಹನ ನೋಡಲು ಹೋಗಿದ್ದವರು ವಾಪಸ್ ಆಗಿಲ್ಲ’ ಎಂದು 20 ದೂರುಗಳು ದಾಖಲಾಗಿವೆ.ನಾ‍ಪತ್ತೆಯಾಗಿರುವ 20ರಲ್ಲಿ ಯಾರೊಬ್ಬರ ಹೆಸರೂ ಮೃತಪಟ್ಟವರ ಮತ್ತು ಗಾಯಾಳುಗಳ ಪಟ್ಟಿಯಲ್ಲಿ ಇಲ್ಲ. ಹೀಗಾಗಿ ರೈಲಿಗೆ ಬಲಿಯಾದವರು ಎಷ್ಟು ಮಂದಿ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಘಟನಾ ಸ್ಥಳದಲ್ಲಿ ಎರಚಾಡಿದ್ದ ದೇಹದ ಭಾಗಗಳನ್ನು ಸಂಗ್ರಹಿಸಿ, ತೆರವು ಮಾಡುವ ಕಾರ್ಯ ಭಾನುವಾರದ ಮಧ್ಯಾಹ್ನದವರೆಗೆ ನಡೆದಿತ್ತು. ಮೃತರ ಮತ್ತು ನಾಪತ್ತೆಯಾದವರ ಸಂಬಂಧಿಕರು ತಮ್ಮವರ ಅವಶೇಷಗಳಿಗಾಗಿ ರೈಲು ಹಳಿಗಳ ಬಳಿ ಹುಡುಕಾಟ ನಡೆಸುತ್ತಿದ್ದಾರೆ.

‘ರಾವಣ ದಹನಕ್ಕೆ ಹೋಗಿದ್ದನನ್ನ ಮಗ ಮನೀಷ್ ಈವರೆಗೆ ಹಿಂತಿರುಗಿಲ್ಲ. ಅವನ ಜೊತೆಯೇ ಹೋಗಿದ್ದ ಚಿಕ್ಕ ಮಗ ವಾಪಸ್ ಬಂದಿದ್ದಾನೆ. ರೈಲು ಹಳಿಗಳ ಬಳಿ ಹುಡುಕಿದೆ. ಒಂದು ಕೈ ಮತ್ತು ಒಂದು ಕಾಲು ಸಿಕ್ಕಿತ್ತು. ಆದರೆ ಅದು ನನ್ನ ಮಗನ ಕೈಕಾಲುಗಳಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿದ್ದೇನೆ. ಆದರೆ ಈವರೆಗೂ ಅವನ ಸುಳಿವು ಸಿಕ್ಕಿಲ್ಲ’ ಎಂದು ವಿಜಯ್ ಕುಮಾರ್ ಎಂಬುವವರು ಅಳಲು ತೋಡಿಕೊಂಡಿದ್ದಾರೆ.

ಘಟನಾ ಸ್ಥಳದಲ್ಲಿ 10 ತಿಂಗಳ ಗಂಡುಮಗುವೊಂದು ಪತ್ತೆಯಾಗಿದೆ. ಅವಘಡ ನಡೆದು ನಾಲ್ಕೈದು ತಾಸುಗಳ ನಂತರ ಆ ಮಗುವನ್ನು ಪೊಲೀಸರು ಪತ್ತೆ ಮಾಡಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಣೆಗೆ ಆಗಿರುವ ಸಣ್ಣ ಗಾಯದಿಂದ ಆ ಮಗು ಚೇತರಿಸಿಕೊಂಡಿದೆ. ಆದರೆ ಈವರೆಗೆ ಅದರ ಪೋಷಕರು ಪತ್ತೆಯಾಗಿಲ್ಲ. ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆಯೇ ಎಂಬುದೂ ಗೊತ್ತಿಲ್ಲ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್‌ ಆಕ್ರೋಶ: ‘ನಮ್ಮ ಚಾಲಕನಿಂದ ತಪ್ಪಾಗಿಲ್ಲ. ಹೀಗಾಗಿ ತನಿಖೆಯಾಗಲೀ, ವಿಚಾರಣೆಯಾಗಲೀ ನಡೆಸುವ ಪ್ರಶ್ನೆಯೇ ಇಲ್ಲ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

‘ರೈಲಿನ ಚಾಲಕ ಕಾಯಂ ನೌಕರನೇ ಅಥವಾ ದಿನಗೂಲಿ ನೌಕರನೇ ಎಂಬುದೂ ಗೊತ್ತಿಲ್ಲ. ರೈಲು ಎಷ್ಟು ವೇಗದಲ್ಲಿ ಚಲಿಸುತ್ತಿತ್ತು ಎಂಬುದನ್ನಾದರೂ ಗಮನಿಸಿದ್ದೀರಾ? ಹಳಿ ಮೇಲೆ ಹಸು ಇದ್ದರೆ ರೈಲು ನಿಲ್ಲಿಸುತ್ತೀರಿ. ಆದರೆ ನೂರಾರು ಜನರ ಮೇಲೆ ರೈಲು ಚಲಾಯಿಸಿದ ಚಾಲಕನನ್ನು ತನಿಖೆ ನಡೆಸದೆಯೇ ದೋಷಮುಕ್ತಗೊಳಿಸಿದ್ದೀರಿ. ಇದ್ಯಾವ ಲೆಕ್ಕಾಚಾರ’ ಎಂದು ಸಚಿವ ನವಜೋತ್ ಸಿಂಗ್ ಸಿಧು ಪ್ರಶ್ನಿಸಿದ್ದಾರೆ.

‘ಪ್ರತೀ ವರ್ಷ ಇಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು, ರೈಲ್ವೆಗೆ ಮಾಹಿತಿ ನೀಡಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಈವರೆಗೆ ಇಂತಹ ಅವಘಡ ನಡೆದಿರಲಿಲ್ಲ.

ಈ ಬಾರಿಯೂ ರೈಲ್ವೆಗೆ ಮಾಹಿತಿ ನೀಡಲಾಗಿತ್ತೇ? ಅವಘಡಕ್ಕೂ ಕೆಲವೇ ಸೆಕೆಂಡ್ ಮೊದಲು ಒಂದು ರೈಲು ಆ ಸ್ಥಳವನ್ನು ನಿಧಾನವಾಗಿ ಹಾದು ಹೋಗಿದೆ. ಆದರೆ ಮತ್ತೊಂದು ರೈಲು ವೇಗವಾಗಿ ಹೋಗಿದ್ದೇಕೆ? ಮೊದಲ ರೈಲು ನಿಧಾನವಾಗಿ ಹೋಗಿದ್ದೇಕೆ? ಇವೆಲ್ಲಾ ತಿಳಿಯಬೇಕು ಎಂದರೆ ತನಿಖೆ ನಡೆಯಬೇಕು’ ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಆಗ್ರಹಿಸಿದ್ದಾರೆ.

**

ಪರಿಸ್ಥಿತಿ ಉದ್ವಿಗ್ನ, ಆಯೋಜಕ ನಾಪತ್ತೆ

ಅಪಘಾತದ ಹೊಣೆಯನ್ನು ಹೊರಲು ಅಮೃತಸರ ನಗರಪಾಲಿಕೆ ಮತ್ತು ರೈಲ್ವೆ ಇಲಾಖೆಗಳು ನಿರಾಕರಿಸಿರುವ ಕಾರಣ ಮೃತರ ಮತ್ತು ಗಾಯಾಳುಗಳ ಸಂಬಂಧಿಕರು ಘಟನಾ ಸ್ಥಳದಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದ್ದಾರೆ.

ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ ಕಾರಣ ಹಿಂಸಾಚಾರ ನಡೆದಿದೆ. ಪ್ರತಿಭಟನಕಾರರು ಪೊಲೀಸರತ್ತ ಕಲ್ಲು ತೂರಿದ್ದಾರೆ. ಘಟನೆಯಲ್ಲಿ ಕೆಲವು ಸಾರ್ವಜನಿಕರು, ಪೊಲೀಸರು ಮತ್ತು ಪತ್ರಕರ್ತರಿಗೂ ಗಾಯಗಳಾಗಿವೆ.

ಅದರ ಬೆನ್ನಲ್ಲೇ ಪ್ರತಿಭಟನಕಾರರು, ರಾವಣ ದಹನ ಕಾರ್ಯಕ್ರಮದ ಆಯೋಜಕ ಸೌರವ್ ಮದನ್ ಮನೆಗೆ ಮುತ್ತಿಗೆ ಹಾಕಿದ್ದಾರೆ. ಅಲ್ಲಿಂದ ಅವರನ್ನು ಚದುರಿಸಲು ಪೊಲೀಸರು ಬಲ ಪ್ರಯೋಗಿಸಿದ ಕಾರಣ, ಪ್ರತಿ
ಭಟನಕಾರರು ಕಲ್ಲು ತೂರಿದ್ದಾರೆ. ಆದರೆ ಘಟನೆ ನಡೆದಾಗಿನಿಂದ ಸೌರವ್ ನಾಪತ್ತೆಯಾಗಿದ್ದಾರೆ. ಅವರ ತಂದೆ–ನಗರ ಪಾಲಿಕೆ ಸದಸ್ಯ ವಿಜಯ್ ಮದನ್ ಸಹ ನಾಪತ್ತೆಯಾಗಿದ್ದಾರೆ. ಬೇರೊಂದು ಸ್ಥಳಕ್ಕೆ ಕಾರು ಕರೆಸಿಕೊಂಡು ಅವರು ಓಡಿ ಹೋಗುವ ದೃಶ್ಯಗಳು ಸಿ.ಸಿ.ಟಿ.ವಿ. ಕ್ಯಾಮೆರಾಗಳಲ್ಲಿ ದಾಖಲಾಗಿವೆ.

**

ರೈಲ್ವೆ ವಿರುದ್ಧ ಮುಗಿಬಿದ್ದ ಕಾಂಗ್ರೆಸ್

‘ನಮ್ಮ ಚಾಲಕನಿಂದ ತಪ್ಪಾಗಿಲ್ಲ. ಹೀಗಾಗಿ ತನಿಖೆಯಾಗಲೀ, ವಿಚಾರಣೆಯಾಗಲೀ ನಡೆಸುವ ಪ್ರಶ್ನೆಯೇ ಇಲ್ಲ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

‘ರೈಲಿನ ಚಾಲಕ ಕಾಯಂ ನೌಕರನೇ ಅಥವಾ ದಿನಗೂಲಿ ನೌಕರನೇ ಎಂಬುದೂ ಗೊತ್ತಿಲ್ಲ. ರೈಲು ಎಷ್ಟು ವೇಗದಲ್ಲಿ ಚಲಿಸುತ್ತಿತ್ತು ಎಂಬುದನ್ನಾದರೂ ಗಮನಿಸಿದ್ದೀರಾ? ಹಳಿ ಮೇಲೆ ಹಸು ಇದ್ದರೆ ರೈಲು ನಿಲ್ಲಿಸುತ್ತೀರಿ. ಆದರೆ ನೂರಾರು ಜನರ ಮೇಲೆ ರೈಲು ಚಲಾಯಿಸಿದ ಚಾಲಕನನ್ನು ತನಿಖೆ ನಡೆಸದೆಯೇ ದೋಷಮುಕ್ತಗೊಳಿಸಿದ್ದೀರಿ. ಇದ್ಯಾವ ಲೆಕ್ಕಾಚಾರ’ ಎಂದು ಸಚಿವ ನವಜೋತ್ ಸಿಂಗ್ ಸಿಧು ಪ್ರಶ್ನಿಸಿದ್ದಾರೆ.

‘ಪ್ರತೀ ವರ್ಷ ಇಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು, ರೈಲ್ವೆಗೆ ಮಾಹಿತಿ ನೀಡಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಈವರೆಗೆ ಇಂತಹ ಅವಘಡ ನಡೆದಿರಲಿಲ್ಲ. ಈ ಬಾರಿಯೂ ರೈಲ್ವೆಗೆ ಮಾಹಿತಿ ನೀಡಲಾಗಿತ್ತೇ? ಅವಘಡಕ್ಕೂ ಕೆಲವೇ ಸೆಕೆಂಡ್ ಮೊದಲು ಒಂದು ರೈಲು ಆ ಸ್ಥಳವನ್ನು ನಿಧಾನವಾಗಿ ಹಾದು ಹೋಗಿದೆ. ಆದರೆ ಮತ್ತೊಂದು ರೈಲು ವೇಗವಾಗಿ ಹೋಗಿದ್ದೇಕೆ? ಮೊದಲ ರೈಲು ನಿಧಾನವಾಗಿ ಹೋಗಿದ್ದೇಕೆ? ಇವೆಲ್ಲಾ ತಿಳಿಯಬೇಕು ಎಂದರೆ ತನಿಖೆ ನಡೆಯಬೇಕು’ ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT