ಶುಕ್ರವಾರ, ನವೆಂಬರ್ 15, 2019
27 °C

ಸಾಹಿತ್ಯ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ: ಮಾತೃಭೂಮಿ

Published:
Updated:

ನವದೆಹಲಿ: ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಮಾತೃಭೂಮಿ ಮಾಧ್ಯಮ ಸಂಸ್ಥೆ ಘೋಷಿಸಿದೆ.

‘ವರ್ಷದ ಪುಸ್ತಕ’ ಹೆಸರಿನಲ್ಲಿ ನೀಡುವ ಈ ಪುರಸ್ಕಾರ ₹ 5ಲಕ್ಷ ನಗದು, ನೆನಪಿನ ಕಾಣಿಕೆಯನ್ನು ಒಳಗೊಂಡಿದೆ. ಇನ್ನು ಮುಂದೆ ಪ್ರತಿವರ್ಷ ಈ ಪ್ರಶಸ್ತಿಯನ್ನು ಸಂಸ್ಥೆ ನೀಡಲಿದೆ. 

ದೇಶದ ಇಂಗ್ಲಿಷ್‌ ಬರಹಗಾರರನ್ನು ಗುರುತಿಸಿ, ಪ್ರೋತ್ಸಾಹಿಸುವುದರ ಜೊತೆಗೆ ಪ್ರಾದೇಶಿಕ ಭಾಷೆಯ ಸಾಹಿತ್ಯ ಇಂಗ್ಲಿಷ್‌ಗೆ ಅನುವಾದ ಆಗುವುದನ್ನು ಪ್ರೇರೇಪಿಸುವುದು ಈ ಪ್ರಶಸ್ತಿಯ ಉದ್ದೇಶವಾಗಿದೆ.   

ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ರಾಜಕಾರಣಿ ಮತ್ತು ಬರಹಗಾರ ಶಶಿ ತರೂರ್‌, ಸಾಹಿತಿ ಚಂದ್ರಶೇಖರ ಕಂಬಾರ ಸೇರಿದಂತೆ ಮೂವರು ಜ್ಯೂರಿಗಳು ಇರಲಿದ್ದಾರೆ. ಇನ್ನೊಬ್ಬರ ಹೆಸರು ಅಂತಿಮಗೊಂಡಿಲ್ಲ. 

‘ಈ ಪ್ರಶಸ್ತಿ ನಮ್ಮ ಕಾಲದ ಶಾಸ್ತ್ರೀಯ ಸಾಹಿತ್ಯ ಕೃತಿಗೆ ಸಲ್ಲಬೇಕು. ಪ್ರಾಚೀನ ಕಾಲದಲ್ಲಿ ರಚಿಸಿದ ಕೃತಿ ಎಂಬ ಕಾರಣಕ್ಕೆ ಶಾಸ್ತ್ರೀಯ ಎಂದು ಕರೆಯುತ್ತಿಲ್ಲ. ಆದರೆ ಅವುಗಳು ನಮ್ಮ ಜೀವನವನ್ನು ಉತ್ತಮವಾಗಿ ಚಿತ್ರಿಸುವ ಸಮಕಾಲೀನ ಕೃತಿಯಾಗಿದೆ. ಅಲ್ಲದೇ ಭಾರತೀಯ ಸಂಸ್ಕೃತಿ ಮತ್ತು ವೈವಿಧ್ಯತೆಯವನ್ನು ಪ್ರತಿನಿಧಿಸುತ್ತದೆ’  ಎಂದು ಚಂದ್ರಶೇಖರ ಕಂಬಾರ ತಿಳಿಸಿದ್ದಾರೆ. 

ಪ್ರಶಸ್ತಿ ಪುರಸ್ಕೃತರ ಹೆಸರನ್ನು ಮಾತೃಭೂಮಿ ಇಂಟರ್‌ನ್ಯಾಷನಲ್‌ ಫೆಸ್ಟಿವಲ್ ಆಫ್ ಲೆಟರ್ಸ್‌ನ(ಎಂಬಿಐಎಫ್ಎಲ್) ಮೂರನೇ ಆವೃತ್ತಿಯಲ್ಲಿ ಘೋಷಿಸಲಾಗುವುದು. ಈ ಕಾರ್ಯಕ್ರಮ 2020ರ ಜನವರಿ 30ರಿಂದ ಫೆಬ್ರವರಿ 2 ರವರೆಗೆ ನಡೆಯಲಿದೆ.

ಪ್ರತಿಕ್ರಿಯಿಸಿ (+)