ಶುಕ್ರವಾರ, ನವೆಂಬರ್ 22, 2019
23 °C

ಮತಾಂತರ: ಮಾಯಾವತಿ ವಿರುದ್ಧ ಬಿಜೆಪಿ ಕಿಡಿ

Published:
Updated:

ನವದೆಹಲಿ: ಸೂಕ್ತ ಸಮಯದಲ್ಲಿ ಬೌದ್ಧ ಧರ್ಮ ಸ್ವೀಕರಿಸುವುದಾಗಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ನೀಡಿರುವ ಹೇಳಿಕೆಗೆ ಬಿಜೆಪಿ ಕಟುವಾಗಿ ಪ್ರತಿಕ್ರಿಯಿಸಿದೆ.

‘ಮಾಯಾವತಿ ಅವರು ಯಾವುದೇ ರೀತಿಯ ಪ್ರದರ್ಶನ ಅಥವಾ ನಾಟಕ ಮಾಡಬೇಕಾಗಿಲ್ಲ’ ಎಂದು ಬಿಜೆಪಿ ಉಪಾಧ್ಯಕ್ಷ ದುಷ್ಯಂತ್‌ ಕುಮಾರ್ ಗೌತಮ್‌ ಹೇಳಿದ್ದಾರೆ.

‘ಬೌದ್ಧ ಧರ್ಮಕ್ಕೆ ಮತಾಂತರ ಹೊಂದಲು ಸೂಕ್ತ ಸಮಯಕ್ಕೆ ಮಾಯಾವತಿ ಅವರು ಕಾಯಬೇಕಾಗಿಲ್ಲ. ಹಲವರು ಬೌದ್ಧ ಧರ್ಮವನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ, ಇಂತಹ ನಾಟಕಗಳನ್ನು ಮಾಡಬೇಕಾಗಿಲ್ಲ. ಈ ಧರ್ಮದಲ್ಲಿ ಹಲವು ಉತ್ತಮ ಸಂಗತಿಗಳಿವೆ. ಅಂಬೇಡ್ಕರ್‌ ಅವರು ಸಹ ಮತಾಂತರ ಹೊಂದಿದ್ದರು’ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಯಾವತಿ ಅವರು ಈ ಬಗ್ಗೆ ಹೇಳಿಕೆ ನೀಡಿದ್ದರು.

 

 

ಪ್ರತಿಕ್ರಿಯಿಸಿ (+)