ಚುನಾವಣಾ ನೀತಿ ಸಂಹಿತೆ ಈಗ ಮೋದಿ ನೀತಿ ಸಂಹಿತೆಯಾಗಿ ಬದಲಾಗಿದೆ: ಕಾಂಗ್ರೆಸ್

ಬುಧವಾರ, ಏಪ್ರಿಲ್ 24, 2019
24 °C

ಚುನಾವಣಾ ನೀತಿ ಸಂಹಿತೆ ಈಗ ಮೋದಿ ನೀತಿ ಸಂಹಿತೆಯಾಗಿ ಬದಲಾಗಿದೆ: ಕಾಂಗ್ರೆಸ್

Published:
Updated:

ನವದೆಹಲಿ: ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಚುನಾವಣಾ ಆಯೋಗವು ಇನ್ನು ಮುಂದೆ ಮಾತನಾಡುವಾಗ ಎಚ್ಚರದಿಂದಿರಿ ಎಂದು ಹೇಳಿತ್ತು. ಚುನಾವಣಾ ಆಯೋಗದ ನಯವಾದ ಎಚ್ಚರಿಕೆ ವಿರುದ್ಧ ಗುಡುಗಿರುವ ಕಾಂಗ್ರೆಸ್, ಇದೀಗ ಎಂಸಿಸಿ (ಚುನಾವಣಾ ನೀತಿ ಸಂಹಿತೆ)  Modi Code of Conduct ಆಗಿ ಬದಲಾಗಿದೆ ಎಂದಿದೆ.

ಕಾಂಗ್ರೆಸ್ ಪಕ್ಷದ ವಕ್ತಾರ ರಣ್‍ದೀಪ್ ಸಿಂಗ್ ಸುರ್ಜೇವಾಲ ಈ ಬಗ್ಗೆ ಟ್ವೀಟ್ ಮಾಡಿದ್ದು, ಆದಿತ್ಯನಾಥರು ಭಾರತೀಯ ಸೇನೆಯನ್ನು ಅವಮಾನಿಸಿದರೂ ಚುನಾವಣಾ ಆಯೋಗ ಅವರಿಗೆ ಪ್ರೇಮ ಪತ್ರ ಬರೆಯುತ್ತಿದೆ.

ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರು ಕಾಂಗ್ರೆಸ್ ಪ್ರಸ್ತಾಪ ಮಾಡಿದ ನ್ಯಾಯ್  (ಕನಿಷ್ಠ ಆದಾಯ ಯೋಜನೆ)ಯನ್ನು ಟೀಕಿಸಿದರೆ ಚುನಾವಣಾ ಆಯೋಗವು ಇನ್ನು ಮುಂದೆ ನೀವು ಹಾಗೆ ಮಾಡಬೇಡಿ ಎಂದು ಹೇಳುತ್ತದೆ. 
ಈ ಚುನಾವಣಾ ಆಯೋಗವು ಯಾಕೆ ಅಧಿಕಾರದಲ್ಲಿರುವವರ ಬಗ್ಗೆ ಸತ್ಯ ಹೇಳಲು ಹಿಂದೇಟು ಹಾಕುತ್ತಿದೆ ಎಂದು ಪ್ರಶ್ನಿಸಿದ್ದಾರೆ.
 

ಬರಹ ಇಷ್ಟವಾಯಿತೆ?

 • 27

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !