ಆಸ್ಪತ್ರೆಗೆ ಆದಿತ್ಯನಾಥ ಭೇಟಿ ವೇಳೆ ಮಾಧ್ಯಮದವರನ್ನು ವಾರ್ಡ್‌ನಲ್ಲಿ ಬಂಧಿಸಿಟ್ಟರು!

ಗುರುವಾರ , ಜೂಲೈ 18, 2019
28 °C

ಆಸ್ಪತ್ರೆಗೆ ಆದಿತ್ಯನಾಥ ಭೇಟಿ ವೇಳೆ ಮಾಧ್ಯಮದವರನ್ನು ವಾರ್ಡ್‌ನಲ್ಲಿ ಬಂಧಿಸಿಟ್ಟರು!

Published:
Updated:

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರು ಭಾನುವಾರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದ ಹೊತ್ತಲ್ಲಿ ಸರಿ ಸುಮಾರು ಹನ್ನೆರಡು ಮಂದಿ ಪತ್ರಕರ್ತರನ್ನು ಎಮರ್ಜೆನ್ಸಿ ವಾರ್ಡ್‌ನಲ್ಲಿ ಬಂಧಿಸಿಟ್ಟ ಘಟನೆಯನ್ನು ಟೈಮ್ಸ್ ನೌ ವರದಿ ಮಾಡಿದೆ.

ಮೊರಾದಾಬಾದ್ ಜಿಲ್ಲಾ ಮೆಜಿಸ್ಟ್ರೇಟ್ ರಾಕೇಶ್ ಕುಮಾರ್ ಮಾಧ್ಯಮದವರನ್ನು ವಾರ್ಡ್‌ನಲ್ಲಿ ಕೂಡಿ ಹಾಕಿದ್ದರು ಎಂದು ಆರೋಪಿಸಲಾಗಿದೆ.

ಆಸ್ಪತ್ರೆಯ ಸೇವೆಗಳ ಗುಣಮಟ್ಟದ ಬಗ್ಗೆ  ಪತ್ರಕರ್ತರು ಯೋಗಿ ಆದಿತ್ಯನಾಥ ಅವರಲ್ಲಿ ಪ್ರಶ್ನೆ ಕೇಳುವುದನ್ನು ತಡೆಯುವುದಕ್ಕಾಗಿ ಮಾಧ್ಯಮದವರನ್ನು ಈ ರೀತಿ ಕೂಡಿ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದಕ್ಕೆ ಸರಿಯಾದ ಕಾರಣ ಏನೆಂದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ ಎಂದು ಸ್ಕ್ರಾಲ್ ಇನ್ ವರದಿ ಮಾಡಿದೆ.

ವರದಿಗಳ ಪ್ರಕಾರ ಮಾಧ್ಯಮದವರನ್ನು ಕೂಡಿ ಹಾಕಿದ ವಾರ್ಡ್ ಹೊರಗೆ ಪೊಲೀಸ್ ಸಿಬ್ಬಂದಿಯನ್ನು ನಿಲ್ಲಿಸಲಾಗಿತ್ತು. ಆದಿತ್ಯನಾಥರು ಆಸ್ಪತ್ರೆಯಿಂದ ಹೊರಗೆ ಹೋದ ನಂತರವೇ ಮಾಧ್ಯಮದವರನ್ನು ಹೊರಗೆ ಬಿಡಲಾಗಿದೆ.

ಮಾಧ್ಯಮದವರನ್ನು ವಾರ್ಡ್‌ನೊಳಗೆ ಕೂಡಿ ಹಾಕಿರುವ ವಿಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿದ ರಾಕೇಶ್ ಕುಮಾರ್, ಇದು ಸತ್ಯಕ್ಕೆ ದೂರವಾದುದು ಎಂದಿದ್ದಾರೆ. ಯೋಗಿ ಆದಿತ್ಯನಾಥರು ಆಸ್ಪತ್ರೆಗೆ ಭೇಟಿ ನೀಡುವ ಹೊತ್ತಿಗೆ ವಾರ್ಡ್‌ನಲ್ಲಿ ಮಾಧ್ಯಮದವರು ಇದ್ದರು. ಆದಿತ್ಯನಾಥರ ಜತೆ ವಾರ್ಡ್‌ನೊಳಗೆ ಹೋಗಬೇಡಿ. ರೋಗಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಈ ರೀತಿ ಹೇಳಿದ್ದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ರಾಕೇಶ್ ಕುಮಾರ್ ಹೇಳಿದ್ದಾರೆ.

ಅಂದಹಾಗೆ ಕಾರಿಡಾರ್‌ನಲ್ಲಿ ಮಾತ್ರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದಿದ್ದಾರೆ ಕುಮಾರ್.

ಆದಿತ್ಯನಾಥ ಅವರು ಜೂನ್ 30ಕ್ಕೆ ಮೊರಾದಾಬಾದ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅವರು ರೋಗಿ ಮತ್ತು ಅವರ ಕುಟುಂಬದ ಜತೆ ಮಾತನಾಡಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬಿಹಾರದಲ್ಲಿ ಮೆದುಳಿನ ತೀವ್ರ ಉರಿಯೂತದಿಂದ ಮಕ್ಕಳು ಸಾವಿಗೀಡಾಗುತ್ತಿರುವ ಸಂದರ್ಭದಲ್ಲಿ ಯೋಗಿ ಆದಿತ್ಯನಾಥರು ಆಸ್ಪತ್ರೆಗಳ ಪರಿಶೀಲನೆಗಾಗಿ ನಡೆಸಿದ್ದರು.
 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !