ಮೌನ ಮುರಿದ ಮುಖ್ಯಮಂತ್ರಿ ಮೆಹಬೂಬಾ

7
ಅಮಿತ್ ಶಾಗೆ ತಿರುಗೇಟು

ಮೌನ ಮುರಿದ ಮುಖ್ಯಮಂತ್ರಿ ಮೆಹಬೂಬಾ

Published:
Updated:
ಮೆಹಬೂಬಾ ಮುಫ್ತಿ

ಶ್ರೀನಗರ : ತಮ್ಮ ಪಕ್ಷ ಹಾಗೂ ಸರ್ಕಾರದ ವಿರುದ್ಧ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮಾಡಿರುವ ಆರೋಪಗಳನ್ನು ತಳ್ಳಿಹಾಕಿರುವ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು, ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಅಸ್ಥಿರಗೊಳಿಸಿಲ್ಲ ಎಂದಿದ್ದಾರೆ. 

ಭಯೋತ್ಪಾದನಾ ಚಟುವಟಿಕೆ ತಡೆಯಲು ವಿಫಲವಾಗಿದೆ ಎಂಬ ಆರೋಪದ ಮೇಲೆ ಪಿಡಿಪಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ಜೂನ್ 19ರಂದು ವಾಪಸ್ ಪಡೆದಿತ್ತು. 

‘ಬಿಜೆಪಿ ಮುಖಂಡರಾದ ರಾಮ್ ಮಾಧವ್, ರಾಜನಾಥ್ ಸಿಂಗ್ ಅವರ ಒಪ್ಪಿಗೆಯಂತೆಯೇ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿತ್ತು. ಮೈತ್ರಿ ಸರ್ಕಾರದ ಅಜೆಂಡಾವನ್ನು ಮೀರಿಲ್ಲ. ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಹಮ್ಮಿಕೊಂಡ ಸರ್ಕಾರದ ಕ್ರಮಗಳಿಗೆ ‘ಮೃದು ಸ್ಪಂದನೆ’ ಎಂಬುದಾಗಿ ಹಣೆಪಟ್ಟಿ ಅಂಟಿಸುವುದು ಸರಿಯಲ್ಲ’ ಎಂದು ಮೆಹಬೂಬಾ ಟೀಕಿಸಿದ್ದಾರೆ. 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !