ಶಾರದ ಪೀಠದ ದಾರಿಯನ್ನು ತೆರೆಯಬೇಕು–ಮೆಹಬೂಬಾ ಮುಫ್ತಿ

ಸೋಮವಾರ, ಏಪ್ರಿಲ್ 22, 2019
29 °C

ಶಾರದ ಪೀಠದ ದಾರಿಯನ್ನು ತೆರೆಯಬೇಕು–ಮೆಹಬೂಬಾ ಮುಫ್ತಿ

Published:
Updated:

 ಶ್ರೀನಗರ: ಪಾಕ್  ಆಕ್ರಮಿತ ಕಾಶ್ಮೀರದಲ್ಲಿರುವ ಶಾರದ ಪೀಠ ದೇಗುಲವನ್ನ ಕಾಶ್ಮೀರಿ ಪಂಡಿತರಿಗೆ ಪ್ರವೇಶಿಸಲು ಅನುವು ಮಾಡಿದರೆ, ಪ್ರಸ್ತುತ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಸಹಕಾರಿಯಾಗಬಹುದು ಎಂದು  ‍ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿಕೆ ನೀಡಿದ್ದಾರೆ

ಶಾರದ ಪೀಠ ದೇಗುಲದ ದಾರಿಯನ್ನು ಕಾಶ್ಮೀರಿ ಪಂಡಿತರಿಗೆ ತೆರೆಯಬೇಕು.ಇಂತಹ ನಡೆಗಳು ಭಾರತ ಪಾಕಿಸ್ತಾನದ ನಡುವೆ ನೆಲೆಸಿರುವ ದ್ವೇಷದ ವಾತಾವರಣ ಹೋಗಲಾಡಿಸುವಲ್ಲಿ ಸಹಕಾರಿಯಾಗುತ್ತದೆ.ಈ ಕುರಿತು ನಾನು ಪ್ರಧಾನಿಯವರಿಗೆ ಪತ್ರ ಬರೆದಿದ್ದೇನೆ ಎಂದು ಮೆಹಬೂಬಾ ಮುಫ್ತಿ ಟ್ವೀಟ್‌ ಮಾಡಿದ್ದಾರೆ.

ಪಾಕಿಸ್ತಾನ ಸರ್ಕಾರ ಶಾರದ ಪೀಠಕ್ಕೆ ಹೋಗುವ ದಾರಿಯನ್ನ ತರೆಯುವುದಾಗಿ  ಮಾಧ್ಯಮಗಳಲ್ಲಿ ವರದಿಯಾಗಿತ್ತು. ಕಳೆದ ಒಂದು ವರ್ಷಗಳಿಂದ ಕಾಶ್ಮೀರಿ ಪಂಡಿತರ ಸಂಘಟನೆಯು ಶಾರದ ಪೀಠದ ರಸ್ತೆಯನ್ನು ತೆರೆಯುವಂತೆ ಆಗ್ರಹಿಸಿದ್ದವು.

ಬರಹ ಇಷ್ಟವಾಯಿತೆ?

 • 40

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !