#MeToo: ಪ್ರಿಯಾ ರಮಣಿ ಆರೋಪದಿಂದ ಅಕ್ಬರ್‌ ಘನತೆಗೆ ಧಕ್ಕೆ: ಮಾಜಿ ಸಹೋದ್ಯೋಗಿ

7
ಕೋರ್ಟ್‌ಗೆ ಹೇಳಿಕೆ

#MeToo: ಪ್ರಿಯಾ ರಮಣಿ ಆರೋಪದಿಂದ ಅಕ್ಬರ್‌ ಘನತೆಗೆ ಧಕ್ಕೆ: ಮಾಜಿ ಸಹೋದ್ಯೋಗಿ

Published:
Updated:
Deccan Herald

ನವದೆಹಲಿ: ‘ಪ್ರಿಯಾ ರಮಣಿ ಆರೋಪದಿಂದ ಕೇಂದ್ರದ ಮಾಜಿ ಸಚಿವ, ಪತ್ರಕರ್ತ ಎಂ.ಜೆ. ಅಕ್ಬರ್‌ ಅವರ ಘನತೆಗೆ ಧಕ್ಕೆಯಾಗಿದ್ದು, ಮತ್ತೆ ಸರಿಪಡಿಸಲಾಗದ ಮಟ್ಟಿಗೆ ಅವರ ಚಾರಿತ್ರ್ಯವಧೆಯಾಗಿದೆ’ ಎಂದು ಅಕ್ಬರ್‌ ಅವರ ಮಾಜಿ ಸಹೋದ್ಯೋಗಿ ಜೋಯಿತಾ ಬಸು ದೆಹಲಿ ಕೋರ್ಟ್‌ಗೆ ಸೋಮವಾರ ಹೇಳಿದ್ದಾರೆ. 

ಪ್ರಿಯಾರಮಣಿ ವಿರುದ್ಧ ಅಕ್ಬರ್‌ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ಅವರ ಪರವಾಗಿ ಸಾಕ್ಷ್ಯ ನುಡಿಯಲು ನ್ಯಾಯಾಲಯಕ್ಕೆ ಹಾಜರಾಗಿದ್ದ ಜೋಯಿತಾ ‘ಸಂಡೇ ಗಾರ್ಡಿಯನ್‌’ ಪತ್ರಿಕೆಯ ಸಂಪಾದಕಿಯಾಗಿದ್ದಾರೆ. 

‘ಅಕ್ಬರ್‌ ಅವರ ಚಾರಿತ್ರ್ಯಕ್ಕೆ ಧಕ್ಕೆ ಉಂಟು ಮಾಡುವ ದುರುದ್ದೇಶದಿಂದ ಪ್ರಿಯಾ ರಮಣಿ, ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ಟ್ವೀಟ್‌ ಮಾಡಿದ್ದಾರೆ’ ಎಂದು ಹೆಚ್ಚುವರಿ ಪ್ರಧಾನ ಮೆಟ್ರೊಪಾಲಿಟನ್‌ ನ್ಯಾಯಾಧೀಶ ಸಮರ್‌ ವಿಶಾಲ್‌ ಅವರಿಗೆ ಹೇಳಿದರು. 

20 ವರ್ಷಗಳ ಹಿಂದೆ ಅಕ್ಬರ್‌ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ರಮಣಿ ಆರೋಪಿಸಿದ್ದರು. ಕಳೆದ ಅಕ್ಬೋಬರ್‌ 17ರಂದು ಎಂ.ಜೆ. ಅಕ್ಬರ್‌ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !