ನಟಿ ಮಾಯಾ ಕೃಷ್ಣನ್ ವಿರುದ್ಧ #MeToo ಆರೋಪ

7
ರಂಗಭೂಮಿ ನಟಿ ಅನನ್ಯಾ ರಾಮ್‌ಪ್ರಸಾದ್ ಆರೋಪ

ನಟಿ ಮಾಯಾ ಕೃಷ್ಣನ್ ವಿರುದ್ಧ #MeToo ಆರೋಪ

Published:
Updated:
Deccan Herald

ಚೆನ್ನೈ: ರಜನೀಕಾಂತ್ ಮುಖ್ಯಭೂಮಿಕೆಯ 2.0 ಚಿತ್ರದಲ್ಲಿ ಅಭಿನಯಿಸಿರುವ ನಟಿ ಮಾಯಾ ಎಸ್.ಕೃಷ್ಣನ್ ವಿರುದ್ಧ ರಂಗಭೂಮಿ ನಟಿ ಅನನ್ಯ ರಾಮ್‌ಪ್ರಸಾದ್ ಅವರು #MeToo ಆರೋಪ ಮಾಡಿದ್ದಾರೆ. 

‘ನಾನು ಲೈಂಗಿಕ ಕಿರುಕುಳದ ಸಂತ್ರಸ್ತೆ. ಮಾಯಾ ಅವರಿಂದ ಮಾನಸಿಕವಾಗಿ, ಭಾವನಾತ್ಮಕವಾಗಿ ನಿಂದನೆಗೊಳಗಾಗಿದ್ದೇನೆ’ ಎಂದು ಅನನ್ಯ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಆರೋಪಗಳನ್ನು ಮಾಯಾ ತಳ್ಳಿಹಾಕಿದ್ದಾರೆ. ಕಾನೂನು ಸಮರ ಎದುರಿಸಲು ಸಜ್ಜಾಗಿರುವುದಾಗಿ ತಿಳಿಸಿದ್ದಾರೆ. ‘ಅನನ್ಯಾ ಆರೋಪಿಸಿರುವಂತೆ ನಾನು ಯಾವುದೇ ತಪ್ಪು ಮಾಡಿಲ್ಲ. ಅವಳನ್ನು ಮಗುವಿನಂತವಳು ಎಂದುಕೊಂಡಿದ್ದೇ ನಾನು ಮಾಡಿದ ತಪ್ಪು, ಇನ್ನು ಹಾಗೆ ಮಾಡುವುದಿಲ್ಲ’ ಎಂದು ಮಾಯಾ ಸ್ಪಷ್ಟನೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 4

  Happy
 • 3

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !