ಶುಕ್ರವಾರ, ಸೆಪ್ಟೆಂಬರ್ 20, 2019
25 °C
ಅತ್ಯಾಚಾರ, ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪ

ನಟ ಕರಣ್‌ ಒಬೆರಾಯ್‌ ಬಂಧನ

Published:
Updated:
Prajavani

ಮುಂಬೈ: ಮಹಿಳೆ ಮೇಲೆ ಅತ್ಯಾಚಾರ ಎಸಗಿ ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪದಡಿ ಹಿಂದಿ ಕಿರುತೆರೆಯ ಖ್ಯಾತ ನಟ ಕರಣ್‌ ಒಬೆರಾಯ್‌ನನ್ನು ಓಶಿವಾರಾ ಠಾಣಾ ಪೊಲೀಸರು ಬಂಧಿಸಿದ್ದಾರೆ.

‘ಮದುವೆಯಾಗುವುದಾಗಿ ನಂಬಿಸಿ ಕರಣ್‌ ಒಬೆರಾಯ್‌ ಅತ್ಯಾಚಾರ ಎಸಗಿದ್ದಾರೆ. ನನ್ನ ಕೆಲ ಆಕ್ಷೇಪಾರ್ಹ ವಿಡಿಯೊ ಚಿತ್ರೀಕರಿಸಿ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗ ಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಮಹಿಳೆಯೊಬ್ಬರು ಒಬೆರಾಯ್‌ ವಿರುದ್ಧ ದೂರು ನೀಡಿದ್ದರು. 

ಒಬೆರಾಯ್‌ ಅವರನ್ನು ಭಾನುವಾರ ಬಂಧಿಸಲಾಗಿದೆ. ಅವರ ವಿರುದ್ಧ ಅತ್ಯಾಚಾರ ಮತ್ತು ಸುಲಿಗೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.  ‌‌

ಕರಣ್‌ ಒಬೆರಾಯ್‌ ಅವರು ‘ಜಸ್ಸಿ ಜೈಸಿ ಕೊಯಿ ನಹೀ’, ‘ಇನ್‌ಸೈಡ್‌ ಎಡ್ಜ್‌’ ಸೇರಿದಂತೆ ಕೆಲ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದರು

 

Post Comments (+)