ಮೊಬೈಲ್‌ ಜಾಮರ್‌ಗೆ ಕಾಂಗ್ರೆಸ್‌ ಆಗ್ರಹ

ಶನಿವಾರ, ಮೇ 25, 2019
28 °C

ಮೊಬೈಲ್‌ ಜಾಮರ್‌ಗೆ ಕಾಂಗ್ರೆಸ್‌ ಆಗ್ರಹ

Published:
Updated:

ಮುಂಬೈ: ಮತಯಂತ್ರಗಳು ಮತ್ತು ವಿ.ವಿ ಪ್ಯಾಟ್‌ ಯಂತ್ರಗಳನ್ನು ಇಟ್ಟಿರುವ ಸ್ಟ್ರಾಂಗ್‌ರೂಂಗಳ ಬಳಿ ಮೊಬೈಲ್‌ ಜಾಮರ್ ಅಳವಡಿಸಬೇಕು ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಆಗ್ರಹಪಡಿಸಿದೆ.

‘ಮತಯಂತ್ರಗಳನ್ನು ಮೊಬೈಲ್‌ ಫೋನ್ ಬಳಸಿ ವೈರ್‌ಲೆಸ್‌ ನೆಟ್‌ವರ್ಕ್ ಮೂಲಕ ತಿರುಚಲು ಸಾಧ್ಯವಿದೆ. ಮತಯಂತ್ರಗಳ ಭದ್ರತೆಗೆ ಈ ಕ್ರಮ ಅಗತ್ಯ’ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್ ಚೌಹಾಣ್‌ ಪ್ರತಿಪಾದಿಸಿದರು.

ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಇವಿಎಂಗಳನ್ನು ಇಟ್ಟಿರುವ ಎಲ್ಲ ಕೊಠಡಿಗಳ ಬಳಿಯೂ ಜಾಮರ್‌ ಅಳವಡಿಸಬೇಕು ಎಂಬುದು ನಮ್ಮ ಬೇಡಿಕೆ’ ಎಂದರು. ಇದಕ್ಕೂ ಮುನ್ನ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಈ ಬಗ್ಗೆ ಮನವಿ ಸಲ್ಲಿಸಿದರು.

ಮತಎಣಿಕೆ ದಿನ ಎಲ್ಲ ಸುತ್ತಿನ ಫಲಿತಾಂಶಗಳ ಪ್ರತಿಯನ್ನು ಅಧಿಕೃತ ಸಹಿಯೊಂದಿಗೆ ಎಲ್ಲ ಪಕ್ಷಗಳಿಗೆ ನೀಡಬೇಕು. ಮರುಎಣಿಕೆ ಬೇಡಿಕೆಯನ್ನು ಆಯಾ ಸುತ್ತುಗಳ ಆಧಾರದಲ್ಲಿ ತೆಗೆದುಕೊಳ್ಳಬೇಕು ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !